ಉತ್ತರಕಾಂಡ ದುರಂತದಿಂದ ಸಂಕಷ್ಟಕ್ಕೆ ಸಿಲುಕಿದ 4 ಹೆಣ್ಣುಮಕ್ಕಳ ಜವಾಬ್ದಾರಿ ಹೊತ್ತ ಸೋನು ಸೂದ್

ಉತ್ತರಕಾಂಡ ದುರಂತದಿಂದ ಸಂಕಷ್ಟಕ್ಕೆ ಸಿಲುಕಿದ 4 ಹೆಣ್ಣುಮಕ್ಕಳ ಜವಾಬ್ದಾರಿ ಹೊತ್ತ ಸೋನು ಸೂದ್

MS   ¦    Feb 24, 2021 07:44:24 PM (IST)
ಉತ್ತರಕಾಂಡ ದುರಂತದಿಂದ ಸಂಕಷ್ಟಕ್ಕೆ ಸಿಲುಕಿದ 4 ಹೆಣ್ಣುಮಕ್ಕಳ ಜವಾಬ್ದಾರಿ ಹೊತ್ತ ಸೋನು ಸೂದ್

ಉತ್ತರಾಖಂಡ : ಫೆ.7 ರಂದು ಉತ್ತರಕಾಂಡದಲ್ಲಿ ನಡೆದ ನೀರ್ಗಲ್ಲು ಸ್ಫೋಟ ದುರಂತದಲ್ಲಿ ಹಲವಾರು ಮಂದಿ ಅನಾಥರಾಗಿದ್ದು, ಅದರಲ್ಲಿ ತಂದೆಯನ್ನು ಕಳೆದುಕೊಂಡು 4 ಹೆಣ್ಣು ಮಕ್ಕಳನ್ನು ಚಿತ್ರನಟ ಸೋನು ಸೂದ್ ದತ್ತು ಪಡೆದಿದ್ದಾರೆ.

ನಾಲ್ಕು ಹೆಣ್ಣು ಮಕ್ಕಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಅಲಾಮ್ ಸಿಂಗ್ ಬಂದೀರ್ ಅವರ ಪುತ್ರಿಯರಾಗಿದ್ದು, ತಂದೆಯನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದರು. ಇದರ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ನಟ ಸೋನು ಸೂದ್ ಅವರಿಗೆ ಸಹಾಯ ನೀಡುವಂತೆ ಮನವಿ ಮಾಡಿದ್ದರು.

ಇದೀಗ ಇವರ ಕಷ್ಟಕ್ಕೆ ಮರುಗಿರುವ ಸೋನು ಸೂದ್, ಸಂಕಷ್ಟದಲ್ಲಿರುವ ಅಲಾಮ್ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದು, ಆ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮದುವೆ ಮಾಡಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಹಾಗೂ ಅವರ ಕಲ್ಯಾಣ ನನ್ನ ಕರ್ತವ್ಯ ಎಂದು ಭರವಸೆ ನೀಡಿದ್ದಾರೆ.