ಗಾಯಕಿ ಕನಿಕಾ ಕಪೂರ್ ಗೆ ಪೊಲೀಸ್ ನೋಟಿಸ್

ಗಾಯಕಿ ಕನಿಕಾ ಕಪೂರ್ ಗೆ ಪೊಲೀಸ್ ನೋಟಿಸ್

HSA   ¦    Apr 27, 2020 02:41:26 PM (IST)
ಗಾಯಕಿ ಕನಿಕಾ ಕಪೂರ್ ಗೆ ಪೊಲೀಸ್ ನೋಟಿಸ್

ಲಕ್ನೋ: ಕೊರೋನಾ ಪಾಸಿಟಿವ್ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿ ಬಂದಿರುವ ಗಾಯಕಿ ಕನಿಕಾ ಕಪೂರ್ ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಕನಿಕಾ ಕಪೂರ್ ವಿರುದ್ಧ ಕೊರೋನಾ ಸೋಂಕು ಹರಡಿದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 269, 270ರ ಪ್ರಕಾರ ದೂರು ದಾಖಲಿಸಲಾಗಿದೆ.

ಕನಿಕಾ ಕಪೂರ್ ಪೊಲೀಸ್ ಠಾಣೆಗೆ ಬಂದು ಲಿಖಿತ ಹೇಳಿಕೆ ನೀಡಬೇಕು. ಇದರ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಕೃಷ್ಣ ನಗರದ ಎಸಿಪಿ ದೀಪಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕನಿಕಾ ಕಪೂರ್ ವಿದೇಶಕ್ಕೆ ಹೋಗಿ ಹಿಂತಿರುಗಿದ ಬಳಿಕ ಸರ್ಕಾರಿ ಆದೇಶ ಉಲ್ಲಂಘಿಸಿ ಕೆಲವು ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಇದರಿಂದ ಕೆಲವರಿಗೆ ಕೊರೋನಾ ಸೋಂಕು ಹರಡಿತ್ತು.