ಬಾಲಿವುಡ್ ನ ಖ್ಯಾತ ನಿರ್ಮಾಪಕ ಹರೀಶ್ ಶಾ ನಿಧನ

ಬಾಲಿವುಡ್ ನ ಖ್ಯಾತ ನಿರ್ಮಾಪಕ ಹರೀಶ್ ಶಾ ನಿಧನ

HSA   ¦    Jul 07, 2020 05:48:26 PM (IST)
ಬಾಲಿವುಡ್ ನ ಖ್ಯಾತ ನಿರ್ಮಾಪಕ ಹರೀಶ್ ಶಾ ನಿಧನ

ಮುಂಬಯಿ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಹರೀಶ್ ಶಾ(76) ಅವರು ಮಂಗಳವಾರ ನಿಧನರಾದರು.

ಮಂಗಳವಾರ ಬೆಳಗ್ಗೆ 6 ಗಂಟೆಗೆ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಸೋದರ ವಿನೋದ್ ಶಾ ತಿಳಿಸಿದ್ದಾರೆ.

`ಮೇರೆ ಜೀವನ್ ಸಾಥಿ’, `ಕಾಲ ಸೋನ’, `ರಾಂ ತೇರಿ ಕಿತ್ನೆ ನಾಮ್’ ಮುಂತಾದ ಚಿತ್ರಗಳನ್ನು ನಿರ್ಮಿಸಿ ಪ್ರಸಿದ್ಧಿ ಗಳಿಸಿದ್ದರು. ಇವರು `ಧನ್ ದೌಲತ್’ ಎನ್ನುವ ಸಿನಿಮಾವನ್ನು ನಿರ್ದೇಶಿಸಿದ್ದರು. ಇದರಲ್ಲಿ ರಿಷಿ ಕಪೂರ್ ಹಾಗೂ ನೀತು ಕಪೂರ್ ನಟಿಸಿದ್ದರು.