ನಟ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಛತ್ರಿ-ಮಾಸ್ಕ್ ವಿತರಣೆ

ನಟ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಛತ್ರಿ-ಮಾಸ್ಕ್ ವಿತರಣೆ

LK   ¦    Jul 02, 2020 01:25:33 PM (IST)
ನಟ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಛತ್ರಿ-ಮಾಸ್ಕ್ ವಿತರಣೆ

ಮೈಸೂರು: ಗೋಲ್ಡನ್ ಸ್ಟಾರ್ ಗಣೇಶ್ ಆರ್ಮಿ ಮೈಸೂರು ವತಿಯಿಂದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜನ್ಮ ದಿನಾಚರಣೆಯನ್ನು ಚಿಕ್ಕ ಗಡಿಯಾರ ಮುಂಭಾಗ ರಸ್ತೆ ಬದಿ ವ್ಯಾಪಾರಸ್ಥರಿಗೆ ಛತ್ರಿ ಹಾಗೂ ಉಚಿತವಾಗಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿ, ಸಾಮಾಜಿಕ ಸೇವೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು

ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತರಾದ ರವೀಂದ್ರ ಜೋಶಿ ಅವರು, ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಈ ಮಹಾಮಾರಿ ಕೊರೋನಾ ಬಗ್ಗೆ ಹೆಚ್ಚು ಜಾಗೃತರಾಗಿ ಅದರಲ್ಲೂ ರಸ್ತೆ ಬದಿ ವ್ಯಾಪಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ವ್ಯಾಪಾರ ಮಾಡಬೇಕು. ನೂರಾರು ಜನ ಖರೀದಿಸಲು ಗ್ರಾಹಕರು ಬರುತ್ತಾರೆ ಅವರಲ್ಲಿ ಯಾರಿಗೆ ಈ ರೋಗದ ಲಕ್ಷಣಗಳು ಇರುತ್ತವೆ ಎಂಬುದು ಗೊತ್ತಾಗುವುದಿಲ್ಲ ಆದ್ದರಿಂದ ಎಚ್ಚರಿಕೆಯಿಂದ ಇರುವಂತೆ ಹೇಳಿದರು.

ಯುವಕರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜನ್ಮ ದಿನಾಚರಣೆಯನ್ನು ಯಾವುದೇ ತರಹದ ಆಡಂಬರ ಇಲ್ಲದೆ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಹಾಗೂ ರಸ್ತೆ ಬದಿ ವ್ಯಾಪಾರಿಗಳಿಗೆ ಛತ್ರಿ ನೀಡಿ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಈ ಸಂದರ್ಭದಲ್ಲಿ ಯಾವುದೇ ತರಹದ ಚಿತ್ರನಟರ ಅಭಿಮಾನಿಗಳು ದುಂದುವೆಚ್ಚ ಮಾಡಿ ಜನ್ಮ ದಿನಾಚರಣೆ ಆಚರಿಸುವ ಬದಲು ಸಮಾಜಕ್ಕೆ ಯಾವುದಾದರೂ ಸೇವಾ ಮನೋಭಾವ ಇಟ್ಟುಕೊಂಡು ಸೇವೆಯನ್ನೇ ಗುರಿ ಮಾಡಿಕೊಂಡು ಕೆಲಸ ಮಾಡಿದರೆ ನಿಜಕ್ಕೂ ಅದು ಆ ನಟರಿಗೂ ಮತ್ತು ಅವರ ಅಭಿಮಾನಿಗಳಿಗೂ ಕೀರ್ತಿ ತಂದುಕೊಡುತ್ತದೆ. ಈ ಹಿಂದೆ ಲಾಕ್ ಡೌನ್ ಸಂದರ್ಭದಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅವರ ಧರ್ಮಪತ್ನಿ ಸಾವಿರಾರು ಬಡ ಜನರ ಕುಟುಂಬಕ್ಕೆ ನೆರವಾಗಿದ್ದಾರೆ. ಅವರು ಬರೀ ಚಿತ್ರ ನಟರಲ್ಲ ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕರಾದ ಎಂ.ಡಿ.ಪಾರ್ಥಸಾರಥಿ, ಗಣೇಶ್ ಆರ್ಮಿ ಮೈಸೂರು ಬಳಗದ ಅಧ್ಯಕ್ಷ ಪ್ರಣವ್ ಸಿಂಹ, ವಿನಯ್, ಚಿತ್ರ, ಸ್ವಾಮಿ, ರವೀಶ್, ಗಿರೀಶ್, ರಂಗನಾಥ್ ಮೊದಲಾದವರಿದ್ದರು.