ಚಿತ್ರಮಂದಿರಗಳ ಮಾಲೀಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ ಆಂಧ್ರಪ್ರದೇಶ ಸರ್ಕಾರ

ಚಿತ್ರಮಂದಿರಗಳ ಮಾಲೀಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ ಆಂಧ್ರಪ್ರದೇಶ ಸರ್ಕಾರ

MS   ¦    Apr 08, 2021 04:18:31 PM (IST)
ಚಿತ್ರಮಂದಿರಗಳ ಮಾಲೀಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ ಆಂಧ್ರಪ್ರದೇಶ ಸರ್ಕಾರ

ವಿಜಯವಾಡ : ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಅನೇಕ ವಿಭಾಗಗಳಲ್ಲಿ ಹಾಗೂ ವಹಿವಾಟುಗಳಲ್ಲಿ ನಷ್ಟವುಂಟಾಗಿದೆ. ಅದರಲ್ಲಿಯೂ ಚಿತ್ರಮಂದಿರಗಳು ಹೆಚ್ಚುಕಮ್ಮಿ ಒಂದು ವರ್ಷಗಳ ಕಾಲ ಹಾಕುವಂತಹ ಪರಿಸ್ಥಿತಿ ಉಂಟಾಗಿತ್ತು. ಈ ಕಾರಣದಿಂದಾಗಿ ಆಂಧ್ರಪ್ರದೇಶ ಸರ್ಕಾರ ಚಿತ್ರಮಂದಿರಗಳ ಮಾಲೀಕರಿಗೆ ಒಂದು ಸಿಹಿಸುದ್ದಿಯನ್ನು ನೀಡಿದೆ.

ಸಂಕಷ್ಟ ಎದುರಿಸುತ್ತಿರುವ ಆಂಧ್ರಪ್ರದೇಶದ ಚಿತ್ರಮಂದಿರಗಳ ಮಾಲೀಕರಿಗೆ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಿದೆ. ಏಪ್ರಿಲ್ , ಮೇ ಮತ್ತು ಜೂನ್ ತಿಂಗಳ ವಿದ್ಯುತ್ ಬಿಲ್ ವಸೂಲಿ ಮಾಡದಿರಲು ಸರ್ಕಾರ ನಿರ್ಧರಿಸಿದೆ . ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಥಿಯೇಟರ್ ಗಳಿಗೆ ಈ ಕೊಡುಗೆ ಪ್ರಕಟಿಸಲಾಗಿದೆ . ಅಷ್ಟೇ ಅಲ್ಲದೆ, ಇತರ ತಿಂಗಳ ವಿದ್ಯುತ್ ಬಿಲ್ ವಿಳಂಬವಾಗಿ ಪಾವತಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ .

ಈ ನಿರ್ಧಾರದ ಮೂಲಕ ಸಿನಿಮಾ ಥಿಯೇಟರ್ ಗಳು ಮಾಲೀಕರಿಗೆ ಸ್ವಲ್ಪ ಸಮಯ ಹಾಗೂ ಅವಕಾಶ ನೀಡಿದಂತಾಗಿದೆ. ಅದರೊಂದಿಗೆ ಸ್ವಲ್ಪ ಮಟ್ಟಿನ ನಿರಾಳವನ್ನು ಕಲ್ಪಿಸಿಕೊಟ್ಟಿದೆ.