ಪ್ರಕಾಶ್ ರಾಜ್ ಗೆ ಶುಭ ಕೋರಿದ ಚಿರಂಜೀವಿ

ಪ್ರಕಾಶ್ ರಾಜ್ ಗೆ ಶುಭ ಕೋರಿದ ಚಿರಂಜೀವಿ

Jayashree Aryapu   ¦    Apr 13, 2021 04:20:27 PM (IST)
ಪ್ರಕಾಶ್ ರಾಜ್ ಗೆ ಶುಭ ಕೋರಿದ ಚಿರಂಜೀವಿ

ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಸಿನಿಮಾ ಯಶಸ್ವಿ ಪ್ರದರ್ಶನ ಕಂಡು ಸಿನಿ ಪ್ರೇಮಿಗಳ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಪವನ್‌ ಪಾತ್ರಕ್ಕೆ ನೀಡಿರುವಷ್ಟೇ ಪ್ರಾಮುಖ್ಯತೆಯನ್ನು ಪ್ರಕಾಶ್ ರಾಜ್‌ಗೂ ನೀಡಲಾಗಿದೆ. ಸಿನಿಮಾ ವೀಕ್ಷಿಸಿದ ಮೆಗಾ ಸ್ಟಾರ್ ಚಿರಂಜೀವಿ, ಪ್ರಕಾಶ್‌ಗೆ ಅಭಿನಂದನೆ ತಿಳಿಸಿದ್ದಾರೆ.

ಒಂದು ಒಳ್ಳೆ ಸಿನಿಮಾ ಬಂದಿದೆ ಅಂದರೆ ಇಡೀ ಕುಟುಂಬ ಹೋಗಿ ಚಿತ್ರವನ್ನು ವೀಕ್ಷಿಸುತ್ತಾರೆ. ಕೆಲವು ದಿನಗಳ ಹಿಂದೆ ಸಿನಿಮಾ ವೀಕ್ಷಿಸಿ, ಟ್ಟೀಟ್ ಮಾಡಿದ ಚಿರಂಜೀವಿ 'ಪ್ರಕಾಶ್ ರಾಜ್‌ ಅವರಂಥ ಕಲಾವಿದರಿದ್ದರೆ, ಸಹಜವಾಗಿ ಸಹ ಕಲಾವಿದರ ಪರ್ಫಾಮೆನ್ಸ್‌ ಹೆಚ್ಚಾಗುತ್ತದೆ. ವಕೀಲ್ ಸಾಬ್ ಚಿತ್ರದಲ್ಲಿ ಪ್ರಕಾಶ್ ನಟನೆ ಅದ್ಭುತ ಹಾಗೂ ಪವನ್ ಎದುರು ಅತ್ಯುತ್ತಮವಾಗಿ ನಟಿಸಿದ್ದಾರೆ. ಶುಭವಾಗಲಿ ಪ್ರಕಾಶ್' ಎಂದಿದ್ದಾರೆ. ಪ್ರಕಾಶ್ ರಾಜ್ ಅನ್ನು ಭೇಟಿಯಾಗಿ ಹೂ ಗುಚ್ಚ ನೀಡಿರುವ ಫೋಟೋ ಹಂಚಿಕೊಂಡಿದ್ದಾರೆ.

'ಚಿರಂಜೀವಿ ಸ್ಫೂರ್ತಿದಾಯಕ ಹಾಗೂ ಪ್ರೋತ್ಸಾಹ ನೀಡುವ ಅಣ್ಣ' ಎಂದು ಚಿರಂಜೀವಿ ಟ್ವೀಟಿಗೆ ಪ್ರಕಾಶ್ ರಾಜ್‌ ಪ್ರತಿಕ್ರಿಯೆ ನೀಡಿದ್ದಾರೆ.