ಕ್ಯಾನ್ಸರ್ ವಿರುದ್ಧ ಹೋರಾಡಿ ಮರಳಿರುವ ಸಂಜಯ್ ದತ್

ಕ್ಯಾನ್ಸರ್ ವಿರುದ್ಧ ಹೋರಾಡಿ ಮರಳಿರುವ ಸಂಜಯ್ ದತ್

Megha R Sanadi   ¦    Oct 15, 2020 06:44:36 PM (IST)
ಕ್ಯಾನ್ಸರ್ ವಿರುದ್ಧ ಹೋರಾಡಿ ಮರಳಿರುವ ಸಂಜಯ್ ದತ್

ನಟ ಸಂಜಯ್ ದತ್, ಅವರ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ, ಅವರ ಹೊಸ ಕ್ಷೌರವನ್ನು ತೋರಿಸುವುದನ್ನು ಕಾಣಬಹುದು ಮತ್ತು ಶೀಘ್ರದಲ್ಲೇ ಅವರು ತಮ್ಮ ಕ್ಯಾನ್ಸರ್ ಅನ್ನು ಸೋಲಿಸುತ್ತಾನೆ ಎಂದು ಭರವಸೆಯನ್ನು ಖುದ್ದಾಗಿ ಸಂಜಯ್ ದತ್ ಅವರೇ ನೀಡುತ್ತಾರೆ. 

ಸಂಜಯ್ ದತ್ ಗೆ ಇತ್ತೀಚೆಗೆ ಶ್ವಾಸಕೋಶದ ಕ್ಯಾನ್ಸರ್ ಇರುವ ವಿಷಯ ತಿಳಿದುಬಂದಿದ್ದು, ವೈದ್ಯಕೀಯ ಚಿಕಿತ್ಸೆಯಿಂದಾಗಿ ಅವರು ಕೆಲಸದಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು.   ದುಬೈನಲ್ಲಿದ್ದ ನಟ ಇತ್ತೀಚೆಗಷ್ಟೇ ಮತ್ತೆ ಮುಂಬೈಗೆ ಬಂದಿದ್ದು ನಟನೆಗೆ ಹಿಂದಿರುಗುವ ಬಗ್ಗೆ ಸುಳಿವು ನೀಡಿದ್ದಾರೆ. ಅದರೊಂದಿಗೆ ತನು ಕ್ಯಾನ್ಸರ್ ವಿರುದ್ಧ ಹೊರಡುತ್ತಿರುವುದಕ್ಕೆ ಸಾಕ್ಷಿಯಂತೆ ಇರುವಂತಹ ಗಾಯವನ್ನು ತೋರಿಸಿ ಇದನ್ನು ಸೋಲಿಸುತ್ತೇನೆ ಎಂಬ ಆತ್ಮ ವಿಶ್ವಾಸದ ಮಾತುಗಳನ್ನು ಹೇಳಿದ್ದಾರೆ.  

ಅದರೊಂದಿಗೆ ಸಂಜಯ್ ದತ್ ಕೆಜಿಎಫ್ ಅಧ್ಯಾಯ 2 ರಲ್ಲಿ ನಟಿಸುವ ಬಗ್ಗೆ ಹಾಗೂ ಅಧೀರಾನ ಪಾತ್ರಕ್ಕೆ ಬೇಕಾಗಿರುವ ಲುಕ್ಸ್ ಗಳನ್ನು ಸಿದ್ದ ಪಡಿಸುವುದಕ್ಕಾಗಿ ಗಡ್ಡವನ್ನು ಬಿಡುತ್ತಿರುವುದಕ್ಕೆ ತಿಳಿಸಿದ್ದಾರೆ. ಬರುವ ನವೆಂಬರ್ ನಲ್ಲಿ ತಾನು ಮತ್ತೆ ನಟನೆಯತ್ತ ಮುಖ ಮಾಡುವುದಾಗಿ ಹೇಳಿರುವ ದತ್ ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.