ಅಭಿನವ ವಾಲ್ಮೀಕಿ ಖ್ಯಾತಿಯ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಅಸ್ವಸ್ಥ; ಸಹಾಯಧನ ಕೋರಿದ ಆಪ್ತರು

ಅಭಿನವ ವಾಲ್ಮೀಕಿ ಖ್ಯಾತಿಯ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಅಸ್ವಸ್ಥ; ಸಹಾಯಧನ ಕೋರಿದ ಆಪ್ತರು

MS   ¦    Feb 22, 2021 07:57:46 PM (IST)
ಅಭಿನವ ವಾಲ್ಮೀಕಿ ಖ್ಯಾತಿಯ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಅಸ್ವಸ್ಥ; ಸಹಾಯಧನ ಕೋರಿದ ಆಪ್ತರು

ಸುಮಾರು ನಲುವತ್ತೈದು ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸವ್ಯಸಾಚಿಯಾಗಿ ಸೇವೆ ಸಲ್ಲಿಸುತ್ತಿರುವ ಅಭಿನವ ವಾಲ್ಮೀಕಿ ಖ್ಯಾತಿಯ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಇವರು ಬಿ.ಯಸ್ಸಿ ಪದವಿಯನ್ನು ಪಡೆದಿದ್ದಾರೆ. ಮೂವತ್ತಕ್ಕೂ ಅಧಿಕ ಯಕ್ಷಗಾನ ಪ್ರಸಂಗವನ್ನು ರಚಿಸಿದ ಹೆಗ್ಗಳಿಕೆ ಇವರ ಬೊಗಸೆಗೆ ಸೇರುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸತತ 30 ವರ್ಷಗಳಿಂದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದು, ಹಲವು ಮೇಳಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಕಲಾ ಪ್ರದರ್ಶನದ ಮೂಲಕ ಯಕ್ಷಗಾನ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿರುವ ಇವರು, ಸಾವಿರಕ್ಕೂ ಅಧಿಕ ಮಂದಿ ಶಿಷ್ಯಂದಿರನ್ನು ಹೊಂದಿದ್ದಾರೆ. ಪುರುಷೋತ್ತಮ ಪೂಂಜರು ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ತಮ್ಮ ಮನೆಯಲ್ಲಿಯೇ ಯಕ್ಷಗಾನ ಸಂಬಂಧಿ ತರಬೇತಿಗಳನ್ನು ನೀಡುತ್ತಾ ಬಂದಿದ್ದಾರೆ.

ಅಷ್ಟೇ ಅಲ್ಲದೆ ಇವರ ಕಲಾಪ್ರದರ್ಶನಕ್ಕೆ ಮೆಚ್ಚಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿ, ಪುಳಿಂಚ ರಾ.ಶೆ ಪ್ರಶಸ್ತಿ, ಯಕ್ಷಮಾನಸ ಪ್ರಶಸ್ತಿ (ಮುಂಬೈ), ಯಕ್ಷ ರಕ್ಷಾ ಪ್ರಶಸ್ತಿ (ಮುಂಬೈ), ಕರ್ನಾಟಕ ಯಕ್ಷಗಾನ ಅಕಾಡೆಮಿ ಪುಸ್ತಕ ಪ್ರಶಸ್ತಿ ಇನ್ನು ಹತ್ತು ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಇಂತಹ ಅದ್ಭುತ ಕಲಾವಿದ ಇಂದು ರಕ್ತ ಸಂಬಂಧಿ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ಎರಡು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೀಗ ಈ ಕಲಾವಿದರಿಗೆ ಹಣದ ಸಮಸ್ಯೆ ಉಂಟಾಗಿದ್ದು, ಮೈಲೋ ಡಿಸ್ ಪ್ಲಾಸಿಯಾ (Myelodysplasia) ಎಂಬ ರಕ್ತ ಸಂಬಂಧಿ ಕಾಯಿಲೆಗೆ ಸಂಬಂಧಿಸಿದಂತೆ Azacytidine + venetoclax ಎಂಬ ಮಾತ್ರೆಯನ್ನು ನೀಡಬೇಕಾಗಿದ್ದು ತಿಂಗಳಿಗೆ 5 ಲಕ್ಷ ರೂಪಾಯಿಯ ಅವಶ್ಯಕತೆಯಿದೆ. ಒಟ್ಟು 6 ತಿಂಗಳು ಅವರಿಗೆ ಈ ಚಿಕಿತ್ಸೆಯನ್ನು ನೀಡಬೇಕಾಗಿದ್ದು ಸುಮಾರು 35 ರಿಂದ 40 ಲಕ್ಷ ರೂಪಾಯಿಯ ಅವಶ್ಯಕತೆಯಿದೆ. ಹಾಗೂ ಸಹಾಯ ನೀಡಲು ಸಾಧ್ಯವಿದ್ದವರು ಸಹಾಯ ಹಸ್ತ ಚಾಚಿ ಓರ್ವ ಕಲಾವಿದನನ್ನು ಮತ್ತೆ ಮೇಲೆತ್ತಬೇಕು ಎಂದು ಅವರ ಆಪ್ತರಾದ ಜೀವಿತೇಶ ಪೂಂಜ ಅವರು ಕೋರಿದ್ದಾರೆ.

Account details are as below.

Bank details:
Name: ​​​Parikshit Poonja
Bank: ICICI ( Koramangala Branch)
Account number: ​343901507425
IFSC: ​​​ICIC0003439

Google pay no: 8197256366