ನಟ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ನಟ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

HSA   ¦    Feb 26, 2020 12:33:39 PM (IST)
ನಟ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದಲ್ಲಿ ಕಾಪಿರೈಟ್ ಉಲ್ಲಂಘಿಸಿ ಹಾಡು ಬಳಸಿರುವ ಆರೋಪದ ಮೇಲೆ ನಟ ರಕ್ಷಿತ್ ಶೆಟ್ಟಿಗೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.

ಲಹರಿ ತಂಡವು ಪ್ರಕರಣವನ್ನು ಎರಡನೇ ಬಾರಿ ದಾಖಲಿಸಿಕೊಂಡಿದೆ ಮತ್ತು ರಕ್ಷಿತ್ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗದೆ ಇರುವುದಕ್ಕೆ ಜಾಮೀನು ರಹಿತ ವಾರೆಂಟ್ ನ್ನು ನ್ಯಾಯಾಲಯ ಹೊರಡಿಸಿದೆ.

ಆದರೆ ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಿತ್ ಶೆಟ್ಟಿ ಅವರು, ನಾವು ಈ ಕೇಸನ್ನು ಹೈಕೋರ್ಟ್ ನಲ್ಲಿ ಗೆದ್ದಿದ್ದೇವೆ. ಆದರೆ ಎರಡನೇ ಬಾರಿ ಪ್ರಕರಣ ದಾಖಲಿಸಿದ ಬಗ್ಗೆ ನನಗೆ ಮತ್ತು ನನ್ನ ವಕೀಲರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ.

2016ರ ಡಿಸೆಂಬರ್ ನಲ್ಲಿ ಬಿಡುಗಡೆಯಾದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಲಹರಿ ಸಂಸ್ಥೆಯ ಶಾಂತಿ ಕ್ರಾಂತಿ ಚಿತ್ರದ ಹಾಡು ಹೇಯ್ ಹೂ ಆರ್ ಯೂ ಬಳಸಲಾಗಿತ್ತು. ಇದರ ವಿರುದ್ಧ ಲಹರಿ ಸಂಸ್ಥೆ ಕಾಪಿ ರೈಟ್ ಕಾಯ್ದೆಯಡಿ ದೂರು ದಾಖಲಿಸಿದೆ.