ರಾಗಿನಿ, ಸಂಜನಾ ಜಾಮೀನು ಅರ್ಜಿ: ನಾಳೆ ಆದೇಶ

ರಾಗಿನಿ, ಸಂಜನಾ ಜಾಮೀನು ಅರ್ಜಿ: ನಾಳೆ ಆದೇಶ

Y.K   ¦    Sep 26, 2020 10:17:59 AM (IST)
ರಾಗಿನಿ, ಸಂಜನಾ ಜಾಮೀನು ಅರ್ಜಿ: ನಾಳೆ ಆದೇಶ

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ತೊಡಗಿಕೊಂಡ ಆರೋಪದಡಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯವು ಆದೇಶವನ್ನು ಸೋಮವಾರ ಪ್ರಕಟಿಸಲಿದೆ.

ಪ್ರಕರಣದ ಕುರಿತು ವಾದ- ಪ್ರತಿವಾದ ಆಲಿಸಿರುವ ಎನ್​ಡಿಪಿಎಸ್ ನ್ಯಾಯಾಲಯ​ ಇಬ್ಬರ ಜಾಮೀನು ಅರ್ಜಿ ಕುರಿತಾಗಿ ಸೋಮವಾರ ಆದೇಶ ಪ್ರಕಟಿಸಲಿದೆ.

ಜಾರಿ ನಿರ್ದೇಶನಾಲಯ ಕೂಡ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯ ಕೂಡ ಅವರ ವಿಚಾರಣೆ ಆರಂಭಿಸಿದೆ. ಅವರ ವಿಚಾರಣೆಗೆ ಅವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿ ಪುರಸ್ಕೃತವಾದ ಹಿನ್ನಲೆಯಲ್ಲಿ ಸಿಸಿಬಿ ಜೊತೆ ಇಡಿ ತನಿಖೆ ಕೂಡ ನಡೆದಿದೆ. ಪರಪ್ಪನ ಅಗ್ರಹಾರದಲ್ಲಿಯೇ ನಟಿಯರಿಬ್ಬರ ವಿಚಾರಣೆಯನ್ನು ಸಿಸಿಬಿ ನಡೆಸುತ್ತಿದೆ.