ನಿರ್ದೇಶಕ ಪ್ರೇಮ್‌ ನಕಲಿ ಟ್ವಿಟರ್‌ ಖಾತೆ ಬಯಲಿಗೆಳೆದ ರಕ್ಷಿತಾ

ನಿರ್ದೇಶಕ ಪ್ರೇಮ್‌ ನಕಲಿ ಟ್ವಿಟರ್‌ ಖಾತೆ ಬಯಲಿಗೆಳೆದ ರಕ್ಷಿತಾ

Jun 08, 2021 02:04:12 PM (IST)
ನಿರ್ದೇಶಕ ಪ್ರೇಮ್‌ ನಕಲಿ ಟ್ವಿಟರ್‌ ಖಾತೆ ಬಯಲಿಗೆಳೆದ ರಕ್ಷಿತಾ

ಬೆಂಗಳೂರು: ಸ್ಯಾಂಡಲ್‍ವುಡ್ ನಟ, ನಿರ್ದೇಶಕ ಆಗಿರುವ ಪ್ರೇಮ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಕುರಿತಾಗಿ ಪ್ರೇಮ್ ಪತ್ನಿ ರಕ್ಷಿತಾ ಸ್ಪಷ್ಟನೆ ನೀಡಿದ್ದಾರೆ.
ನಿರ್ದೇಶಕ ಪ್ರೇಮ್ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆಯಲಾಗಿದ್ದು, ಅದರ ಮುಖಾಂತರ ಪ್ರೇಮ್ ನಿರ್ದೇಶನದ ಮುಂದಿನ ಚಿತ್ರವನ್ನು ಘೋಷಿಸಲಾಗಿದೆ. ದರ್ಶನ್ ಅವರ ಜೊತೆಗೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎನ್ನುವ ಕುರಿತಾಗಿ ಸುಳ್ಳು ಸುದ್ದಿ ನಿರ್ದೇಶಕ ಪ್ರೇಮ್ ಹೆಸರಿನಲ್ಲಿರು ನಕಲಿ ಟ್ವಿಟ್ಟರ್ ಖಾತೆ ಮುಖಾಂತರ ಪ್ರೇಮ್ ನಿರ್ದೇಶನದ ಮುಂದಿನ ಚಿತ್ರವನ್ನು ಘೋಷಿಸಲಾಗಿತ್ತು.
ಏಕ್ ಲವ್‍ಯಾ ಬಳಿಕ ನನ್ನ ಮುಂದಿನ ಚಿತ್ರ ಯಾವುದು ಅಂತ ಎಲ್ಲರೂ ಕೇಳುತ್ತಿದ್ದಾರೆ. ಹಾಗೇ, ನನ್ನ ಸ್ನೇಹಿತ ದರ್ಶನ್ ಜೊತೆಗೆ ನಾನು ಯಾವಾಗ ಮತ್ತೆ ಕೈಜೋಡಿಸುತ್ತೇನೆ ಅಂತಲೂ ಕೇಳುತ್ತಿದ್ದಾರೆ. ಹೀಗಾಗಿ, ಇಂದು ನನ್ನ ನಿರ್ದೇಶನದಲ್ಲಿ ಮೂಡಿಬರುವ ಹೊಸ ಚಿತ್ರವನ್ನು ಘೋಷಿಸುತ್ತಿದ್ದೇನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55ನೇ ಚಿತ್ರಕ್ಕೆ ನಾನು ಆಕ್ಷನ್ ಕಟ್ ಹೇಳಲಿದ್ದೇನೆ. ಶೀರ್ಷಿಕೆ ಮತ್ತು ಫಸ್ಟ್ ಲುಕ್ ಬಗ್ಗೆ ಸದ್ಯದಲ್ಲೇ ಅನೌನ್ಸ್ ಮಾಡುವೆ ಎಂದು ಪ್ರೇಮ್ ಹೆಸರಿನಲ್ಲಿ ಸೃಷ್ಟಿಯಾಗಿರುವ ನಕಲಿ ಖಾತೆ ಮೂಲಕ ಟ್ವೀಟ್ ಮಾಡಲಾಗಿತ್ತು. ಪ್ರೇಮ್ ನಿರ್ದೇಶನದ ಮುಂದಿನ ಚಿತ್ರದ ಕುರಿತಾದ ನಕಲಿ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಪತ್ನಿ ರಕ್ಷಿತಾ ಪ್ರೇಮ್ ಟ್ವಿಟ್ಟರ್ ಮೂಲಕವೇ ಸ್ಪಷ್ಟನೆ ನೀಡಿದ್ದಾರೆ. ಇದು ಪ್ರೇಮ್ ಅವರ ಅಕೌಂಟ್ ಅಲ್ಲ. ಇದನ್ನ ಯಾರೇ ಹೇಳಿದ್ದರೂ ಅವರಿಗೆ ದೇವರು ಒಳ್ಳೆಯದು ಮಾಡಲಿ. ಪ್ರೇಮ್ ಮತ್ತು ದರ್ಶನ್ ಆದಷ್ಟು ಬೇಗ ಒಟ್ಟಿಗೆ ಕೆಲಸ ಮಾಡಲಿ ಎಂಬುದು ನನ್ನ ನಿರೀಕ್ಷೆಯೂ ಹೌದು ಎಂದು ರಕ್ಷಿತಾ ಪ್ರೇಮ್ ಟ್ವೀಟ್ ಮಾಡಿ ಗೊಂದಲಕ್ಕೆ ತೆರೆ ಎಳೆದು ಸ್ಪಷ್ಟ ಪಡಿಸಿದ್ದಾರೆ.
ಪ್ರೇಮ್ ಆಕ್ಷನ್ ಕಟ್ ಹೇಳಿದ್ದ ಚೊಚ್ಚಲ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕರಿಯ ಸಿನಿಮಾ ನಿರ್ದೇಶಕ ಪ್ರೇಮ್ ಹಾಗೂ ನಟ ದರ್ಶನ್ ಇಬ್ಬರಿಗೂ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಈ ಚಿತ್ರದ ಬಳಿಕ ಪ್ರೇಮ್ ಹಾಗೂ ದರ್ಶನ್ ಮತ್ತೆ ಕೈಜೋಡಿಸಿಲ್ಲ. ಇಬ್ಬರೂ ಮತ್ತೆ ಒಂದಾಗಿ ಹಿಟ್ ಚಿತ್ರ ಕೊಡಲಿ ಎಂಬುದು ಅಭಿಮಾನಿಗಳ ಆಶಯ. ಅಭಿಮಾನಿಗಳ ಆಶಯವನ್ನು ಮುಂದೊಂದು ದಿನ ಪ್ರೇಮ್ ಹಾಗೂ ದರ್ಶನ್ ಈಡೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.