ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನಟಿ ಪ್ರನೀತಾ ಸುಭಾಷ್ ಒಂದು ಲಕ್ಷ ದೇಣಿಗೆ

ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನಟಿ ಪ್ರನೀತಾ ಸುಭಾಷ್ ಒಂದು ಲಕ್ಷ ದೇಣಿಗೆ

HSA   ¦    Jan 13, 2021 11:20:40 AM (IST)
ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನಟಿ ಪ್ರನೀತಾ ಸುಭಾಷ್ ಒಂದು ಲಕ್ಷ ದೇಣಿಗೆ

ಬೆಂಗಳೂರು: ನಟಿ ಪ್ರನೀತಾ ಸುಭಾಷ್ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದು, ಜನರು ಕೂಡ ಮಂದಿರ ನಿರ್ಮಾಣ ಕಾರ್ಯಕ್ಕೆ ಧನಸಹಾಯ ಮಾಡಿ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡಿರುವರು.

ಸಮರ್ಪಣಾ ಅಭಿಯಾನದ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದೇನೆ. ಈ ಐತಿಹಾಸಿಕ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ಟ್ವೀಟ್ ಮಾಡಿರುವರು.

ರಾಷ್ಟ್ರೀಯ ಸ್ವಯಂ ಸೇವಾ ಸಂಘ ರಾಮಮಂದಿರ ನಿರ್ಮಾಣ ಕಾರ್ಯಕ್ಕಾಗಿ ರಾಜ್ಯದೆಲ್ಲೆಡೆ ಸಮರ್ಪಣಾ ಅಭಿಯಾನವನ್ನು ಕೈಗೊಂಡಿದೆ. ಸ್ವಯಂಸೇವಕರು ಪ್ರತಿಯೊಬ್ಬರ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸುವರು.