ಶಿಲ್ಪಾ ಶೆಟ್ಟಿಗೆ ಹೆಣ್ಣು ಮಗು: ಸಂತಸ ಹಂಚಿಕೊಂಡ ದಂಪತಿ

ಶಿಲ್ಪಾ ಶೆಟ್ಟಿಗೆ ಹೆಣ್ಣು ಮಗು: ಸಂತಸ ಹಂಚಿಕೊಂಡ ದಂಪತಿ

YK   ¦    Feb 21, 2020 01:01:48 PM (IST)
ಶಿಲ್ಪಾ ಶೆಟ್ಟಿಗೆ ಹೆಣ್ಣು ಮಗು: ಸಂತಸ ಹಂಚಿಕೊಂಡ ದಂಪತಿ

ಬಾಲಿವುಡ್ ನಟ, ಕುಡ್ಲದ ಬೆಡಗಿ ಶಿಲ್ಪಾ ಶೆಟ್ಟಿಗೆ ಹೆಣ್ಣು ಮಗುವಾಗಿದ್ದು, ಈ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಫೆ.15ರಂದು ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗೆ ಹೆಣ್ಣು ಮಗುವಾಗಿದೆ. ಮಗುವಿಗೆ ಸಮಿಶಾ ಶೆಟ್ಟಿ ಕುಂದ್ರಾ ಎಂದು ನಾಮಕರಣ ಮಾಡಲಾಗಿದೆ. ನಿಮ್ಮೆಲ್ಲರ ಹಾರೈಕೆ ನಮ್ಮ ಮಗಳ ಮೇಲಿರಲಿ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.

ನಮ್ಮ ಪ್ರಾರ್ಥನೆಯಂತೆ ನಮ್ಮ ಮನೆಗ ದೇವತೆ ಆಗಮಿಸಿದ್ದಾಳೆ ಎಂದು ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಬರೆದುಕೊಂಡಿದ್ದಾರೆ.