ಸರ್ಜಾ ಕುಟುಂಬಕ್ಕೆ ಜೂನಿಯರ್ ಚಿರು ಎಂಟ್ರಿ: ಅಭಿಮಾನಿಗಳಲ್ಲಿ ಸಂಭ್ರಮ

ಸರ್ಜಾ ಕುಟುಂಬಕ್ಕೆ ಜೂನಿಯರ್ ಚಿರು ಎಂಟ್ರಿ: ಅಭಿಮಾನಿಗಳಲ್ಲಿ ಸಂಭ್ರಮ

YK   ¦    Oct 22, 2020 11:40:10 AM (IST)
ಸರ್ಜಾ ಕುಟುಂಬಕ್ಕೆ ಜೂನಿಯರ್ ಚಿರು ಎಂಟ್ರಿ: ಅಭಿಮಾನಿಗಳಲ್ಲಿ ಸಂಭ್ರಮ

ಬೆಂಗಳೂರು: ನಟಿ ಮೇಘನಾ ಸರ್ಜಾ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೀಗ ಸರ್ಜಾ ಕುಟುಂಬಕ್ಕೆ ಜೂನಿಯರ್ ಚಿರುವಿನ ಎಂಟ್ರಿಯಾಗಿದೆ.

ಈ ಸಂತಸದ ಸುದ್ದಿಯನ್ನು ಕೇಳಿದ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. 2018ರಲ್ಲಿ ನಟಿ ಮೇಘನಾ– ಚಿರಂಜೀವಿ ಸರ್ಜಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವರ ನಿಶ್ಚಿತಾರ್ಥ ದಿನವೇ ಮೇಘನಾ ಮಗುವಿಗೆ ಜನ್ಮ ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿದ್ದು, ಈ ವೇಳೆ ಮೇಘನಾ ಅವರು ಗರ್ಭಿಣಿ ಎಂದು ತಿಳಿದುಬಂದಿತ್ತು.

ತದನಂತರ ಸರ್ಜಾ ಫ್ಯಾಮೀಲಿಗೆ ಚಿರು ಮತ್ತೇ ಹುಟ್ಟಿ ಬರುತ್ತಾನೆ ಎಂದು ಭರವಸೆ ಮೂಡಿತ್ತು. ಅದರಂತೆಯೇ ಇಂದು ಸರ್ಜಾ ಫ್ಯಾಮೀಲಿಗೆ ಇಂದು ಜೂನಿಯರ್ ಚಿರುವಿನ ಎಂಟ್ರಿಯಾಗಿದೆ.