ಮತದಾನ ಮಾಡಲು ಸೈಕಲ್ನಲ್ಲಿ ತೆರಳಿದ ತಮಿಳು ಖ್ಯಾತ ನಟ ವಿಜಯ್

ಮತದಾನ ಮಾಡಲು ಸೈಕಲ್ನಲ್ಲಿ ತೆರಳಿದ ತಮಿಳು ಖ್ಯಾತ ನಟ ವಿಜಯ್

MS   ¦    Apr 06, 2021 03:07:48 PM (IST)
ಮತದಾನ ಮಾಡಲು ಸೈಕಲ್ನಲ್ಲಿ ತೆರಳಿದ ತಮಿಳು ಖ್ಯಾತ ನಟ ವಿಜಯ್

ಚೆನ್ನೈ: ತಮಿಳುನಾಡಿನಲ್ಲಿ ಇಂದು ವಿಧಾನಸಭಾ ಚುನಾವಣಾ ಮತದಾನ ನಡೆಯುತ್ತಿದ್ದು, ಹಲವಾರು ಗಣ್ಯ ವ್ಯಕ್ತಿಗಳು ಹಾಗೂ ನಟ ನಟಿಯರು ತಮ್ಮ ಮತವನ್ನು ನೀಡಿ ಹಕ್ಕನ್ನು ಚಲಾಯಿಸುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ತಮಿಳು ಖ್ಯಾತ ನಟ ದಳಪತಿ ವಿಜಯ್ ಕೂಡ ಒಬ್ಬರು. ಆದರೆ ಇದೀಗ ಅವರು ಮತ ಚಲಾಯಿಸಲು ಹೋದ ರೀತಿ ಎಲ್ಲೆಡೆ ವೈರಲ್ ಆಗಿದೆ.

ಹೌದು, ದಳಪತಿ ವಿಜಯ್ ಇಂದು ಮತಚಲಾಯಿಸಲು ತಮ್ಮ ನಿವಾಸದಿಂದ ಬೂತ್ ವರೆಗೆ ಸೈಕಲ್ ನಲ್ಲಿ ತೆರಳಿ ಒಂದು ಸಂಚಲನ ಮೂಡಿಸಿದ್ದಾರೆ. ಇದೀಗ ಅವರು ಸೈಕಲ್ ನಲ್ಲಿ ಹೋಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಹಲವಾರು ಊಹಾಪೋಹಗಳಿಗೆ ಗುರಿಯಾಗಿದೆ.

ಒಂದೆಡೆ ಪೆಟ್ರೋಲ್ ಡೀಸೆಲ್ ದರ ಏರಿಕೆಯ ಕುರಿತು ವಿರೋಧ ವ್ಯಕ್ತಪಡಿಸಲು ಈ ರೀತಿಯ ನಡೆಯನ್ನು ತೋರಿಸಿದ್ದಾರೆಂದು ಹೇಳಲಾಗುತ್ತದೆ. ಅಂತೆ ಇನ್ನೊಂದೆಡೆ ಮತದಾನ ಮಾಡುವ ಭೂತ್ ಮನೆ ಸಮೀಪವೇ ಇದ್ದ ಈ ರೀತಿಯ ನಡೆಯನ್ನು ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತದೆ. ಆದರೆ ಈವರೆಗೂ ನಟ ವಿಜಯ್ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.