ನಾಳೆ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ

ನಾಳೆ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ

YK   ¦    Jul 06, 2019 04:42:02 PM (IST)
ನಾಳೆ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ

ಬಹುನಿರೀಕ್ಷಿತ ಬಹು ತಾರಾಗಣವಿರುವ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಭಾನುವಾರ ನಡೆಯಲಿದೆ. ಮುನಿರತ್ನ ನಿರ್ಮಾಣದಲ್ಲಿ ಮೂಡಿಬಂದ ಕುರುಕೇತ್ರ ಈಗಾಗಲೇ ಜನರಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ.

ಈ ಸಂಬಂಧ ಟ್ವಿಟ್ ಮಾಡಿದ ನಟ ದರ್ಶನ್, ‘ಬಹುತಾರಾಗಣ ಹೊಂದಿರುವ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದ ಡಿಯೋ ಬಿಡುಗಡೆ ಸಮಾರಂಭ ಇದೇ ಭಾನುವಾರ ನಡೆಯಲಿದೆ. ಬಹಳಷ್ಟು ನಟರು ಹಾಗೂ ತಂತ್ರಜ್ಞರು ಈ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೇ ಸದಾ ಇರಲಿ’ ಎಂದು ಬರೆದುಕೊಂಡಿದ್ದಾರೆ.

ನಾಗಣ್ಣ ಚಿತ್ರವನ್ನು ನಿರ್ದೇಶನ ಮಾಡಿದ್ದು,ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್, ದಿ.ರೆಬೆಲ್ ಸ್ಟಾರ್ ಅಂಬರೀಶ್, ವಿ.ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಭಾರತಿ ವಿಷ್ಣುವರ್ಧನ, ಸ್ನೇಹ, ಹರಿಪ್ರಿಯ, ಮೇಘನಾ ರಾಜ್, ಅಥಿತಿ ಆರ್ಯಾ, ಸೋನು ಸೋದು, ಚಂದನ್ ಕುಮಾರ್ ಭರತ್ ಗೌಡ ಅವರು ಬಣ್ಣ ಹಚ್ಚಿದ್ದಾರೆ.