2ತಿಂಗಳ ಬಳಿಕ ಶೂಟಿಂಗ್ ಗೆ ವಾಪಾಸ್ಸಾದ ನಟ ಶಿವರಾಜ್ ಕುಮಾರ್

2ತಿಂಗಳ ಬಳಿಕ ಶೂಟಿಂಗ್ ಗೆ ವಾಪಾಸ್ಸಾದ ನಟ ಶಿವರಾಜ್ ಕುಮಾರ್

YK   ¦    Sep 09, 2019 03:05:57 PM (IST)
 2ತಿಂಗಳ ಬಳಿಕ ಶೂಟಿಂಗ್ ಗೆ ವಾಪಾಸ್ಸಾದ ನಟ ಶಿವರಾಜ್ ಕುಮಾರ್

ಬೆಂಗಳೂರು: 2 ತಿಂಗಳ ಬಳಿಕ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮತ್ತೇ ಶೂಟಿಂಗ್ ಗೆ ವಾಪಾಸ್ಸಾಗಿದ್ದಾರೆ. 

ತಮ್ಮ ಮುಂಬರುವ ಚಿತ್ರ ಭಜರಂಗಿ 2 ಚಿತ್ರದ ಚಿತ್ರೀಕರಣದಲ್ಲಿ ಸೋಮವಾರ ಭಾಗಿಯಾಗಿದ್ದಾರೆ. ಈ ಚಿತ್ರವನ್ನು ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಭುಜದ ಚಿಕಿತ್ಸೆಗಾಗಿ ಶಿವಣ್ಣ ಅವರು ಜುಲೈನಲ್ಲಿ ಲಂಡನ್ ನಲ್ಲಿ ಚಿಕಿತ್ಸೆ ಪಡೆದು ವಾಪಾಸಗಿದ್ದರು. ವೈದ್ಯರ ಸೂಚನೆಯಂತೆ ಇದೀಗ ಶಿವಣ್ಣ ಶೂಟಿಂಗ್ ಗೆ ವಾಪಾಸ್ಸಾಗಿದ್ದಾರೆ.

ಮೂಲಗಳ ಪ್ರಕಾರ, ಹರ್ಷ ಶನಿವಾರ  ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಚಿತ್ರೀಕರಣದ ಬಗ್ಗೆ ಮಾತುಕತೆ ನಡೆಸಿದ್ದರು.  ಈ ಚಿತ್ರ 5 ಭಾಷೆಗಳಲ್ಲಿ ತೆರೆಕಾಣಲಿದೆ.