News Kannada
Thursday, November 30 2023
ಮನರಂಜನೆ

ನಿಲ್ಲಿಸಿದ್ದ ಕಾರಿನೊಳಗೆ ಖ್ಯಾತ ನಟನ ಶವ ಪತ್ತೆ

Actor Vinod Thomas
Photo Credit : News Kannada Twitter

ಕೊಟ್ಟಾಯಂ: ಖ್ಯಾತ ನಟ ವಿನೋದ್ ಥಾಮಸ್ ಕೇರಳದ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ(ನ.18) ತಿಳಿಸಿದ್ದಾರೆ. ವಿನೋದ್ ಥಾಮಸ್‌ಗೆ 45 ವರ್ಷ ವಯಸ್ಸಾಗಿತ್ತು.

ಹೋಟೆಲ್‌ ನ ಮಾಲೀಕರೋರ್ವರು ತಮ್ಮ ಹೋಟೆಲ್‌ ಮುಂಭಾಗದಲ್ಲಿ ಸುಮಾರು ದಿನಗಳಿಂದ ನಿಲ್ಲಿಸಿದ್ದ ಕಾರಿನ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಕಾರನ್ನು ಪರೀಕ್ಷಿಸಿದಾಗ ಕಾರಿನ ಒಳಗೆ ವ್ಯಕ್ತಿಯೊಬ್ಬರ ದೇಹ ಕಾಣಿಸಿಕೊಂಡಿದೆ. ಅದು ಖ್ಯಾತ ನಟ ವಿನೋದ್‌ ಥಾಮಸ್‌ ಅವರ ದೇಹವಾಗಿತ್ತು. ನಂತರ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ವೈದ್ಯರು ಅವರನ್ನು ಪರೀಕ್ಷಿಸಿದಾಗ ಅವರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು  ತಿಳಿಸಿದ್ದಾರೆ.

ಥಾಮಸ್ ಅವರು ‘ಅಯ್ಯಪ್ಪನುಮ್ ಕೊಶ್ಯುಮ್’, ‘ನಾಥೋಲಿ ಒರು ಚೆರಿಯ ಮೀನಲ್ಲಾ’, ‘ಒರು ಮುರೈ ವಂತ್ ಪಾಠಯಾ’, ‘ಹ್ಯಾಪಿ ವೆಡ್ಡಿಂಗ್’ ಮತ್ತು ‘ಜೂನ್’ ಇತರ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

See also  ʼಡೇರ್‌ಡೆವಿಲ್ ಮುಸ್ತಾಫಾ' ಎರಡನೇ ವಾರ ಯಶಸ್ವಿ ಪ್ರದರ್ಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು