News Karnataka Kannada
Saturday, April 20 2024
Cricket
ಮನರಂಜನೆ

ಮಗಳ ವಿಚಾರದಿಂದ ನನ್ನ ಕುಟುಂಬದ ನೆಮ್ಮದಿ ಹಾಳಾಗಿದೆ ಎಂದ ನಟಿ ಕೀರ್ತಿ ಸುರೇಶ್‌ ತಂದೆ

Actress Keerthy Suresh's father says his daughter's death has ruined his family's peace
Photo Credit : News Kannada

ಚೆನ್ನೈ: ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಅವರ ತಂದೆ ತಮ್ಮ ಮಗಳು ಫರ್ಹಾನ್ ಬಿನ್ ಲಿಯಾಕತ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಲಿದ್ದಾರೆ ಎಂಬ ವರದಿಗಳು ಸುಳ್ಳು ಎಂದು ಹೇಳಿದ್ದಾರೆ.

ಸುರೇಶ್ ಕುಮಾರ್ ಅವರು ಕೇರಳ ಬಿಜೆಪಿ ನಾಯಕಿ ಶೋಬಾ ಸುರೇಂದ್ರನ್ ಅವರ ಫೇಸ್ ಬುಕ್ ಪೇಜ್ ಮೂಲಕ ಹೇಳಿಕೆ ನೀಡಿದ್ದಾರೆ.

ಶೋಭಾ ಫೇಸ್‌ ಬುಕ್‌ನಲ್ಲಿ ಕೀರ್ತೀ ಸುರೇಶ್‌ ತಂದೆ ಸುರೇಶ್‌ ಕುಮಾರ್‌ ಹೀಗೆ ಹೇಳಿದ್ದಾರೆ. ನನ್ನ ಮಗಳು ಕೀರ್ತಿ ಸುರೇಶ್ ವ್ಯಕ್ತಿಯೊಬ್ಬರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ. ಆತನನ್ನೆ ಮದುವೆಯಾಗುತ್ತಾರೆ ಎಂಬುದೆಲ್ಲ ಸುಳ್ಳು ಸುದ್ದಿ. ಇದೆಲ್ಲ ಆನ್‌ಲೈನ್‌ ನಲ್ಲಿ ವರದಿಗಳ ಕಿತಾಪತಿ ಎಂದು ಹೇಳಿದ್ದಾರೆ.

ನನ್ನ ಕುಟುಂಬದ ಸ್ನೇಹಿತನಾಗಿರುವ ಫರ್ಹಾನ್ ಅವರ ಹುಟ್ಟುಹಬ್ಬದಂದು, ಕೀರ್ತಿ ಫೋಟೋಗಳನ್ನು ಪೋಸ್ಟ್‌ ಮಾಡಿದ್ದರು. ಅದನ್ನೇ ಆಧರಿಸಿ ತಮಿಳು ಮ್ಯಾಗಜಿನ್‌ಗಳು ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸಿವೆ ಎಂದು ಹೇಳಿದ್ದಾರೆ. ಮುದುವೆಯ ಕುರಿತು ಹಲವರು ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಇದರಿಂದ ನನ್ನ ಕುಟಂಬದ ನೆಮ್ಮದಿ ಹಾಳಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕೀರ್ತಿ ಅವರ ಮದುವೆ ನಿಶ್ಚಯವಾದರೆ ಮಾಧ್ಯಮಗಳಿಗೆ ಹಾಗೂ ಸಾರ್ವಜನಿಕರಿಗೆ ಮೊದಲು ಮಾಹಿತಿ ನೀಡುವುದಾಗಿ ಸುರೇಶ್ ಹೇಳಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಜನರಿಗೆ ಕರೆ ನೀಡಿದ್ದಾರೆ. ಫರ್ಹಾನ್ ಕೀರ್ತಿ ಕುಟುಂಬದ ಸ್ನೇಹಿತರಾಗಿದ್ದು ಕೀರ್ತಿ ದುಬೈಗೆ ಭೇಟಿ ನೀಡಿದಾಗ ಅವರ ಜೊತೆಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು