ಹೊಸದಿಲ್ಲಿ: ಶಿವ ಸರಣಿ ಪುಸ್ತಕಗಳ ಮೂಲಕವೇ ಓದುಗರ ಮೆಚ್ಚುಗೆಗೆ ಪಾತ್ರರಾದ ಖ್ಯಾತ ಬರಹಗಾರ ಅಮೀಶ್ ತ್ರಿಪಾಠಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಲಂಡ್ನಲ್ಲಿ ಸರಳವಾಗಿ ತಮ್ಮ ವಿವಾಹ ಸಮಾರಂಭ ನೆರವೇರಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ಜನವರಿಯಲ್ಲಷ್ಟೇ ಶಿವಾನಿ ಎಂಬುವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ತ್ರಿಪಾಠಿ ಮಂಗಳವಾರ ಲಂಡನ್ನಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಈ ಕುರಿತು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಅವರು ಶಿವನ ಕೃಪೆ ನಿಮ್ಮೆಲ್ಲರ ಪ್ರೀತಿಯೊಂದಿಗೆ ಲಂಡನ್ನಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದೇನೆ ಎಂದಿದ್ದಾರೆ.