ನವದೆಹಲಿ : ನಿನ್ನೆ ರಾತ್ರಿ ತಮ್ಮ ಪನ್ವೇಲ್ ಫಾರ್ಮ್ಹೌಸ್ನಲ್ಲಿದ್ದಾಗ ನಟ ಸಲ್ಮಾನ್ ಖಾನ್ ಅವ್ರಿಗೆ ಹಾವು ಕಚ್ಚಿದ್ದು, ನಂತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಧ್ಯ ಅವ್ರ ಆರೋಗ್ಯ ಸ್ಥಿತಿ ಈಗ ಚೆನ್ನಾಗಿದ್ದು, ವಿಷಕಾರಿಯಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ. ಹಾಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಪನ್ವೇಲ್ ಫಾರ್ಮ್ಹೌಸ್ನಲ್ಲಿದ್ದ ಸಲ್ಮಾನ್ ಖಾನ್
ಘಟನೆ ನಡೆದಾಗ ಸಲ್ಮಾನ್ ಖಾನ್ ತಮ್ಮ ಪನ್ವೆಲ್ ಫಾರ್ಮ್ಹೌಸ್ನಲ್ಲಿದ್ದರು. ಕ್ರಿಸ್ಮಸ್ ಆಚರಣೆಗಾಗಿ ಕುಟುಂಬ ಸಮೇತ ಅಲ್ಲಿಗೆ ತೆರಳಿದ್ದು, ಶನಿವಾರ ಮಧ್ಯಾಹ್ನ 3 ಗಂಟೆಗೆ ಆಸ್ಪತ್ರೆಗೆ ಕರೆತರಲಾಗಿದೆ. ಮಾಧ್ಯಮಗಳಿಗೆ ಬೆಳಗ್ಗೆ ಮಾಹಿತಿ ಸಿಕ್ಕಿದೆ. ಸಧ್ಯ ಸಲ್ಮಾನ್ ಖಾನ್ ಸಂಪೂರ್ಣವಾಗಿ ಅಪಾಯದಿಂದ ಪಾರಾಗಿದ್ದು, ಇದೀಗ ಮತ್ತೆ ಪನ್ವೆಲ್ ಫಾರ್ಮ್ಹೌಸ್ಗೆ ಆಗಮಿಸಿ ಕುಟುಂಬದೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ.