NewsKarnataka
Sunday, September 26 2021

ಬಾಲಿವುಡ್

ಕೃತಿ ಸೋನನ್ ದುಬಾರಿ ಕಾರು ಖರೀದಿ

ಬಾಲಿವುಡ್ ನಟಿ ಮರ್ಸಿಡಿಸ್​ ಮೇಬ್ಯಾಕ್​ ಜಿಎಲ್​ಎ 600’ ಕಾರನ್ನು ಕೃತಿ ಖರೀದಿಸಿದ್ದಾರೆ. ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸ್ಟಾರ್​ ನಟರ ಮನೆಯಲ್ಲಿ ಮಾತ್ರ ಈ ಕಾರು ಇದೆ. ಈ ಮೊದಲು ರಣವೀರ್​ ಸಿಂಗ್, ಅರ್ಜುನ್​ ಕಪೂರ್​ ಅವರು ‘ಮರ್ಸಿಡಿಸ್​ ಮೇಬ್ಯಾಕ್​ ಜಿಎಲ್​ಎ 600’ ಖರೀದಿಸಿದ್ದರು. ಈಗ ಅವರ ಸಾಲಿಗೆ ಕೃತಿ ಕೂಡ ಸೇರ್ಪಡೆ ಆಗಿದ್ದಾರೆ. ಇತ್ತೀಚೆಗೆ ಮೆಕಾಡ್​ ಫಿಲ್ಸ್ಮ್​ ನಿರ್ಮಾಣ ಸಂಸ್ಥೆಯ ಆಫೀಸ್​ಗೆ ಕೃತಿ ಸನೋನ್​ ಭೇಟಿ ನೀಡಿದ್ದರು. ಆಗ ಇದೇ ಕಾರಿನಲ್ಲಿ ಅವರು ಬಂದಿದ್ದರು. ಅದನ್ನು ಕಂಡು ಎಲ್ಲರೂ ಹುಬ್ಬೇರಿಸಿದ್ದಾರೆ.
ಬಾಲಿವುಡ್​ ನಟಿ ಕೃತಿ ಸನೋನ್​ ಅವರು ಈಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ‘ಮಿಮಿ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದ ಈ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರು ಶಹಭಾಷ್​ ಎಂದಿದ್ದಾರೆ. ಬಾಡಿಗೆ ತಾಯಿ ಪಾತ್ರದಲ್ಲಿ ಅವರ ಅಭಿನಯಕ್ಕೆ ಎಲ್ಲರಿಂದ ಮೆಚ್ಚುಗೆ ಕೇಳಿಬಂದಿದೆ. ಇದೇ ಸಿನಿಮಾದ ‘ಪರಮ ಸುಂದರಿ’ ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಎಲ್ಲ ಖುಷಿಗಳ ನಡುವೆ ಕೃತಿ ಮನೆಗೆ ಹೊಸ ಕಾರು ಬಂದಿದೆ. ಬರೋಬ್ಬರಿ 2.43 ಕೋಟಿ ರೂ. ಬೆಲೆ ಬಾಳುವ ಐಷಾರಾಮಿ ಕಾರನ್ನು ಅವರು ಖರೀದಿಸಿದ್ದಾರೆ. ಅದು ಈಗ ಎಲ್ಲರ ಕಣ್ಣು ಕುಕ್ಕುತ್ತಿದೆ.

ಮಿಮಿ ಚಿತ್ರದ ಯಶಸ್ಸಿನಿಂದ ಕೃತಿಗೆ ತುಂಬ ಖುಷಿ ಆಯಿತು. ಹಾಗಾಗಿ ಏನಾದರೂ ಅಮೂಲ್ಯವಾದದ್ದನ್ನು ಖರೀದಿಸಲು ಅವರು ನಿರ್ಧರಿಸಿದರು. ಈ ಕಾರು ಕೊಂಡುಕೊಳ್ಳಬೇಕು ಎಂಬುದು ಅವರ ಬಹುದಿನಗಳ ಕನಸಾಗಿತ್ತು. ಅದೀಗ ನನಸಾಗಿದೆ’ ಎಂದು ಅವರ ಆಪ್ತರು ಹೇಳಿದ್ದಾರೆ. ಮಿಮಿ ಚಿತ್ರ ಗೆದ್ದ ಬಳಿಕ ಅವರ ಡಿಮ್ಯಾಂಡ್​ ಕೂಡ ಹೆಚ್ಚಿದೆ. ಕೃತಿಯ ಕಾಲ್​ಶೀಟ್​ ಪಡೆಯಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ಯಾವುದೇ ಸ್ಟಾರ್​ ನಟ ಇಲ್ಲದಿದ್ದರೂ ಸಿನಿಮಾವನ್ನು ಸೂಪರ್​ ಹಿಟ್​ ಮಾಡಿಸಬಲ್ಲ ಸಾಮರ್ಥ್ಯ ತಮಗೆ ಇದೆ ಎಂಬುದನ್ನು ‘ಮಿಮಿ’ ಮೂಲಕ ಕೃತಿ ಸಾಬೀತು ಪಡಿಸಿದ್ದಾರೆ.
ಸದ್ಯ ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ನಟಿಸುತ್ತಿರುವ ‘ಆದಿಪುರುಷ್​’ ಚಿತ್ರಕ್ಕೆ ಕೃತಿ ಸನೋನ್​ ನಾಯಕಿ. ಅಕ್ಷಯ್​ ಕುಮಾರ್​ ನಾಯಕತ್ವದ ‘ಬಚ್ಚನ್​ ಪಾಂಡೆ’, ‘ಗಣಪತ್​’, ‘ಹಮ್​ ದೋ ಹಮಾರೇ ದೋ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!