ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌ಗೆ ಇಂದು ಜನ್ಮದಿನದ ಸಂಭ್ರಮ. ಪ್ರತೀ ವರ್ಷದಂತೆ ಈ ವರ್ಷವೂ ಮನ್ನತ್ ನಿವಾಸದ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ.
ಮಧ್ಯರಾತ್ರಿಯಿಂದಲೇ ಫ್ಯಾನ್ಸ್ ಮನ್ನತ್ ಮುಂದೆ ಆಗಮಿಸಿದ್ದು, ತಮ್ಮ ನೆಚ್ಚಿನ ನಟನನ್ನು ನೋಡಲು ಕಾತರರಾಗಿದ್ದು ಕಂಡು ಬಂತು.
ಪುತ್ರ ಆರ್ಯನ್ ಖಾನ್ ಡ್ರಗ್ ಕೇಸ್ ಸಂಬಂಧಿಸಿದಂತೆ ಶಾರುಖ್ ಬಗ್ಗೆಯೂ ಕೆಲವು ನೆಗೆಟಿವ್ ಮಾತುಗಳು ಹರಿದಾಡಿದ್ದವು. ಆದರೆ ಯಾವುದೇ ರೂಮರ‍್ಸ್‌ಗೆ ತಲೆಕೆಡಿಸಿಕೊಳ್ಳದ ಫ್ಯಾನ್ಸ್ ಶಾರುಖ್‌ನ ಒಂದು ಭೇಟಿಗಾಗಿ ಕಾದು ಕುಳಿತಿದ್ದರು.
ಶಾರುಖ್ ಮನೆ ಮುಂದೆ ಇರುವ ಜನಜಂಗುಳಿ ತಡೆಯಲು ಪೊಲೀಸರು ಹರಸಾಹಸ ಪಡಬೇಕಾಗಿತ್ತು. ಕಾರ್‌ನಲ್ಲಿ ಶಾರುಖ್ ಬಂದಿದ್ದು, ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಜನ್ಮದಿನಕ್ಕೆ ಶುಭ ಕೋರಲು ಎಲ್ಲೆಲ್ಲಿಂದಲೋ ಬಂದ ಅಭಿಮಾನಿಗಳಿಗೆ ನಿರಾಸೆಯಾಗದಂತೆ ಶಾರುಖ್ ಎಲ್ಲರನ್ನೂ ಭೇಟಿ ಮಾಡಿದ್ದಾರೆ.