News Kannada
Wednesday, October 05 2022

ಬಾಲಿವುಡ್

ಕಾಶ್ಮೀರ್ ಫೈಲ್ಸ್ ಬಳಿಕ ‘ದಿ ದಿಲ್ಲಿ ಫೈಲ್ಸ್’ ಜತೆ ಬರಲಿದ್ದಾರೆ ವಿವೇಕ್ ಅಗ್ನಿಹೋತ್ರಿ - 1 min read

Photo Credit :

ಮುಂಬಯಿ : ‘ದಿ ಕಾಶ್ಮೀರ್ ಫೈಲ್ಸ್ ‘ ಚಲನಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಶೀಘ್ರದಲ್ಲೇ ತಮ್ಮ ಮುಂದಿನ ಚಲನಚಿತ್ರ ‘ದಿ ದಿಲ್ಲಿ ಫೈಲ್ಸ್‘ನಲ್ಲಿ ಕೆಲಸ ಮಾಡಲಿದ್ದಾರೆ ಎಂದು ಗುರುವಾರ ಬಹಿರಂಗಪಡಿಸಿದ್ದಾರೆ.

ಟ್ವಿಟರ್‌ನಲ್ಲಿ ಪೋಸ್ಟ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿರುವ ಅಗ್ನಿಹೋತ್ರಿ, ‘ದಿ ಕಾಶ್ಮೀರ್ ಫೈಲ್ಸ್ ‘ ಬೆಂಬಲಿಸಿದ ಎಲ್ಲರಿಗೆ ನಾನು ಧನ್ಯವಾದ ಹೇಳುತ್ತೇನೆ. ಕಳೆದ ನಾಲ್ಕು ವರ್ಷಗಳಿಂದ, ನಾವು ಅತ್ಯಂತ ಪ್ರಾಮಾಣಿಕತೆಯಿಂದ ತುಂಬಾ ಶ್ರಮಿಸಿದ್ದೇವೆ. ನಾನು ನಿಮ್ಮ ಸಮಯವನ್ನು ಹಾಳು ಮಾಡಿರಬಹುದು ಆದರೆ ಕಾಶ್ಮೀರಿ ಹಿಂದೂಗಳ ನರಮೇಧ ಮತ್ತು ಆದ ಅನ್ಯಾಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮುಖ್ಯವಾಗಿತ್ತು. ನಾನು ಹೊಸ ಚಿತ್ರದಲ್ಲಿ ಕೆಲಸ ಮಾಡುವ ಸಮಯ ಬಂದಿದೆ ” ಎಂದು ಟ್ವೀಟ್ ಮಾಡಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಗಲ್ಲಾಪೆಟ್ಟಿಗೆಯ ಮಾತ್ರವಲ್ಲದೆ ರಾಜಕೀಯವಾಗಿಯೂ ಹಿಂದೆಂದೂ ಕಂಡಿರದ ಭರ್ಜರಿ ಪ್ರಚಾರ ಮತ್ತು ಯಶಸ್ಸು ಗಳಿಸಿತ್ತು, ಮಾತ್ರವಲ್ಲದೆ ವಿವಾದವನ್ನು ಉಂಟುಮಾಡಿತ್ತು. ಕೆಲವು ವಿಮರ್ಶಕರು ಮತ್ತು ಲೇಖಕರು ರಾಜಕೀಯಕ್ಕಾಗಿ ಚಲನಚಿತ್ರವನ್ನು ಎಳೆದು ತಂದರೂ 330 ಕೋಟಿಗೂ ಹೆಚ್ಚು ಹಣವನ್ನು ಗಳಿಸುವ ಮೂಲಕ ಗಲ್ಲಾಪೆಟ್ಟಿಗೆ ಸೂರೆಗೈದಿತ್ತು.

See also  ಮುಂಬೈನ ವಸತಿ ಕಟ್ಟಡದಲ್ಲಿ ಯುವತಿಯ ಶವ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು