News Kannada
Monday, January 30 2023

ಬಾಲಿವುಡ್

ಓಟಿಟಿಗೆ ಲಗ್ಗೆ ಇಡಲು ತಯಾರಾಗುತ್ತಿದೆ ‘ಹೀರೋಪಂತಿ 2’

Photo Credit :

‘ಹೀರೋಪಂತಿ’ ಸಿನಿಮಾ ಗೆದ್ದು ಬೀಗಿತ್ತು. ಈ ಕಾರಣಕ್ಕೆ ಚಿತ್ರದ ಸೀಕ್ವೆಲ್ ಬಗ್ಗೆ ನಿರೀಕ್ಷೆ ಮೂಡಿತ್ತು. ಆದರೆ, ಈ ಚಿತ್ರಕ್ಕೆ ಹೇಳಿಕೊಳ್ಳುವಂತಹ ವಿಮರ್ಶೆ ಸಿಕ್ಕಿಲ್ಲ.
ನಟ ಟೈಗರ್ ಶ್ರಾಫ್ ಸಿನಿಮಾಗಳಲ್ಲಿ ಆಯಕ್ಷನ್​ ದೃಶ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ.

ಮೈನವಿರೇಳಿಸುವ ದೃಶ್ಯಗಳಿಗೆ ಹೆಚ್ಚು ಆದ್ಯತೆ ಇರುತ್ತದೆ. ಈ ಮೊದಲು ಇದು ಅನೇಕ ಬಾರಿ ಸಾಬೀತಾಗಿದೆ. ಅವರು ಮಾಡುವ ಸ್ಟಂಟ್ಸ್​​ಗಳನ್ನು ನೋಡೋಕೆ ಅವರ ಫ್ಯಾನ್ಸ್​ ಇಷ್ಟಪಡುತ್ತಾರೆ. ಇತ್ತೀಚೆಗೆ ಅವರ ನಟನೆಯ ‘ಹೀರೋಪಂತಿ 2’ ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆಗಳು ಬಂದವು. ಇನ್ನು, ‘ಕೆಜಿಎಫ್ 2’ ಅಬ್ಬರಕ್ಕೆ ಚಿತ್ರ ನಲುಗಿ ಹೋಗಿತ್ತು. ಹೀಗಾಗಿ, ಕೆಲವೇ ದಿನಗಳಲ್ಲಿ ಟೈಗರ್​ ನಟನೆಯ ಸಿನಿಮಾ ಚಿತ್ರಮಂದಿರದಿಂದ ಕಾಲ್ಕಿತ್ತಿತು. ಈಗ ಸಿನಿಮಾ ಒಟಿಟಿಯಲ್ಲಿ ಲಗ್ಗೆ ಇಡುತ್ತಿದೆ.

ಏಪ್ರಿಲ್ 29ರಂದು ಬಾಲಿವುಡ್​ನಲ್ಲಿ ಟೈಗರ್ ಶ್ರಾಫ್ ಅಭಿನಯದ ‘ಹೀರೋಪಂತಿ 2’ ಹಾಗೂ ಅಜಯ್​ ದೇವಗನ್ ನಟನೆಯ ‘ರನ್​ವೇ 34’ ಸಿನಿಮಾ ಒಟ್ಟೊಟ್ಟಿಗೆ ರಿಲೀಸ್ ಆದವು. ‘ಹೀರೋಪಂತಿ’ ಸಿನಿಮಾ ಗೆದ್ದು ಬೀಗಿತ್ತು. ಈ ಕಾರಣಕ್ಕೆ ಚಿತ್ರದ ಸೀಕ್ವೆಲ್ ಬಗ್ಗೆ ನಿರೀಕ್ಷೆ ಮೂಡಿತ್ತು. ಆದರೆ, ಈ ಚಿತ್ರಕ್ಕೆ ಹೇಳಿಕೊಳ್ಳುವಂತಹ ವಿಮರ್ಶೆ ಸಿಕ್ಕಿಲ್ಲ. ಈ ಚಿತ್ರ ಮೊದಲ ದಿನ 6.50 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಚಿತ್ರದ ಒಟ್ಟಾರೆ ಕಲೆಕ್ಷನ್ 25 ಕೋಟಿ ರೂಪಾಯಿ ದಾಟಿಲ್ಲ.

ಸಿನಿಮಾಗೆ ಕೋಟ್ಯಂತರ ರೂಪಾಯಿ ಸುರಿದು ನಿರ್ಮಾಪಕರು ಚಿತ್ರದಿಂದ ನಷ್ಟ ಅನುಭವಿಸಿದ್ದಾರೆ ಎಂದು ವರದಿ ಆಗಿದೆ. ಬಾಲಿವುಡ್​ನ ಖ್ಯಾತ ನಿರ್ಮಾಪಕ ಸಾಜಿದ್​ ನಾಡಿಯದ್ವಾಲಾ ಅವರು ‘ಹೀರೋಪಂತಿ’ ಸಿನಿಮಾ ಮೂಲಕ ಟೈಗರ್​ ಶ್ರಾಫ್​ ಅವರನ್ನು ಲಾಂಚ್​ ಮಾಡಿದ್ದರು. ಈ ಸರಣಿಯ ಎರಡನೇ ಸಿನಿಮಾ ಪ್ಲಾಫ್ ಆಗಿದೆ.

See also  ಮಾನನಷ್ಟ ಮೊಕದ್ದಮೆ: ನಟಿ ಕಂಗನಾ ಅರ್ಜಿ ಹೈಕೋರ್ಟ್‌ನಲ್ಲಿ ವಜಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು