ಶಾರೂಕ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ತಾರಾಗಣದ ಪಠಾಣ್ ಚಿತ್ರದ ಟೀಸರ್ ಇಂಟರ್‌ನೆಟ್‌ನಲ್ಲಿ ಸಂಚಲನ ಉಂಟು ಮಾಡಿದೆ ಮತ್ತು ಪ್ರೇಕ್ಷಕರು ಕಿಂಗ್ ಎಸ್‌ಆರ್‌ಕೆ ನಾಲ್ಕು ಸುದೀರ್ಘ ವರ್ಷಗಳ ನಂತರ ಬೆಳ್ಳಿತೆರೆಗೆ ಮರಳಿದ್ದಾರೆ! ಜನರು ಸಿದ್ಧಾರ್ಥ್ ಆನಂದ್ ನಿರ್ದೇಶನದ ಯಶ್ ರಾಜ್ ಫಿಲಂಸ್ ನಿರ್ಮಾಣ ಈ ಆ್ಯಕ್ಷನ್ ಅದ್ಭುತದಲ್ಲಿ ಎಸ್‌ಆರ್‌ಕೆ ಅವರ ಹೊಚ್ಚಹೊಸ ಅವತಾರದಲ್ಲಿ ನೋಡಿ ಮಂತ್ರಮುಗ್ಧರಾಗಿದ್ದಾರೆ.
ಈ ಚಲನಚಿತ್ರದಲ್ಲಿನ ಅಸಾಧಾರಣ ಸವಾಲಿನ ಆ್ಯಕ್ಷನ್ ದೃಶ್ಯಗಳಿಗೆ ಅವರ ದೇಹವನ್ನು ಸಜ್ಜುಗೊಳಿಸಲು ಈ ಮೆಗಾಸ್ಟಾರ್ ಅಪಾರ ಬದ್ಧತೆ ತೋರಿದರು ಎಂದು ನಿರ್ದೇಶಕರು ಹೇಳಿದ್ದಾರೆ.
ಸಿದ್ಧಾರ್ಥ್, “ಶಾರೂಕ್ ಖಾನ್ ಪಠಾಣ್‌ಗಾಗಿ ತಮ್ಮ ದೇಹವನ್ನು ಅಪಾರವಾಗಿ ದಂಡಿಸಿದರು. ಆದ್ದರಿಂದ ಪಠಾಣ್ ಟೀಸರ್‌ಗೆ ಅವರಿಗೆ ದೊರೆತ ಅಭೂತಪೂರ್ವ ಪ್ರೀತಿಯು ಅದು ಅವರಿಗೆ ಸೂಕ್ತ ಹಾಗೂ ಹೆಚ್ಚಿನ ಪ್ರೀತಿ ತೋರುವ ಅಗತ್ಯವಿದೆ. ನಾನು ಪಠಾಣ್‌ಗೆ ಅವರನ್ನು ಮೊದಲು ಭೇಟಿ ಮಾಡಿದಾಗ ನಾವು ಅದು ಅವರಿಗೆ ದೈಹಿಕವಾಗಿ ಎಷ್ಟು ಸವಾಲಿನದಾಗಿರುತ್ತದೆ ಎಂದು ಚರ್ಚೆ ನಡೆಸಿದೆವು ಮತ್ತು ಅವರು ಅದಕ್ಕೆ ಸಜ್ಜಾದರು ಹಾಗು ಅದು ಬೆಳ್ಳಿತೆರೆಯ ಮೇಲೆ ಕಾಣಿಸುತ್ತದೆ” ಎಂದರು.
ಅವರು ಮುಂದುವರಿದು, “ಅವರು ರೋಮಾಂಚಕವಾಗಿರಲು ಬಯಸಿದರು ಮತ್ತು ಪ್ರೇಕ್ಷಕರೂ ಅದರ ಅನುಭವವನ್ನು ಬೆಳ್ಳಿತೆರೆಯ ಮೇಲೆ ಪಡೆಯಬೇಕು ಎಂದು ಬಯಸಿದರು. ಅವರು ತಮ್ಮ ದೇಹವನ್ನು ಹುರಿಗೊಳಿಸಿಕೊಂಡ ಪರಿ, ಅತ್ಯಂತ ಅಪಾಯಕಾರಿ ಸ್ಟಂಟ್‌ಗಳಲ್ಲಿ ಅವರು ಪಡೆದ ಅಪಾರ ತರಬೇತಿ, ಅಪಾಯಕಾರಿ ಪ್ರದೇಶಗಳು ಮತ್ತು ವಾತಾವರಣದ ಸಂದರ್ಭಗಳು ಅವರ ದೇಹ ಹಾಗೂ ಬದ್ಧತೆಯ ಮೂಲಕ ಅಸಾಧಾರಣ ಪ್ರಶಂಸೆಯ ಅತ್ಯಂತ ದೊಡ್ಡ ಆ್ಯಕ್ಷನ್ ಚಿತ್ರವನ್ನು ಭಾರತಕ್ಕೆ ಕೊಡಲು ಸಾಧ್ಯವಾಗಿದೆ” ಎಂದರು.
ನಿರ್ದೇಶಕರು ಮುಂದುವರಿದು, “ನಾವು ವಿನ್ಯಾಸಗೊಳಿಸಿದ ಆ್ಯಕ್ಷನ್ ದೃಶ್ಯಗಳಲ್ಲಿ ಅವರು ಎಲ್ಲ ನೋವನ್ನೂ ಹಲ್ಲು ಕಚ್ಚಿ ಸಹಿಸಿದ್ದು ನಿಜಕ್ಕೂ ನಂಬಲಸಾಧ್ಯ. ಶಾರೂಕ್ ಖಾನ್ ಅವರಂತೆ ಮತ್ತೊಬ್ಬರಿಲ್ಲ ಮತ್ತು ನೀವು ಅವರು ಚಲನಚಿತ್ರದಲ್ಲಿ ನಟಿಸಿರುವ ತೀವ್ರತೆಯನ್ನು ಕಾಣಲು ನೀವು ಕಾಯಬೇಕು” ಎಂದರು.
ಪಠಾಣ್ ಜನವರಿ 25, 2023ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.