News Kannada
Friday, March 01 2024
ತಮಿಳು

ಚೆನ್ನೈ: ಕೊನೆಗೂ ಇನ್ಸ್ಟಾಗ್ರಾಮ್ ಖಾತೆ ತೆರೆದ ತಮಿಳು ಸೂಪರ್ ಸ್ಟಾರ್ ವಿಜಯ್

Photo Credit : IANS

ಚೆನ್ನೈ: ಇನ್ ಸ್ಟಾಗ್ರಾಮ್ ನಿಂದ ದೂರ ಉಳಿದಿದ್ದ ತಮಿಳು ಸೂಪರ್ ಸ್ಟಾರ್ ತಲಪತಿ ವಿಜಯ್ ಕೊನೆಗೂ ಇನ್ ಸ್ಟಾಗ್ರಾಮ್ ಗೆ ಸೇರ್ಪಡೆಯಾಗಿದ್ದಾರೆ. “ಹಲೋ ನನ್ಬಾ ಮತ್ತು ನನ್ಬಿಸ್” ಎಂಬ ಉತ್ಸಾಹಭರಿತ ಹಾಡಿನ ಮೂಲಕ ವಿಜಯ್ ಪಾದಾರ್ಪಣೆ ಮಾಡಿದ್ದಾರೆ.

ಲೋಕೇಶ್ ‘ವಿಕ್ರಮ್’ ಕನಕರಾಜ್ ಅವರ ‘ಲಿಯೋ’ ಚಿತ್ರದ ಚಿತ್ರೀಕರಣದಲ್ಲಿರುವ ವಿಜಯ್ ತಮ್ಮ ಇನ್ಸ್ಟಾಗ್ರಾಮ್ ಫೋಟೋದಲ್ಲಿ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ತನ್ನದೇ ಆದ ಇನ್ ಸ್ಟಾಗ್ರಾಮ್ ಖಾತೆಯನ್ನು ತೆರೆಯುವುದರೊಂದಿಗೆ, ಚಿತ್ರದ ಪ್ರಚಾರವು ಖಂಡಿತವಾಗಿಯೂ ಅವರ ಜನಪ್ರಿಯತೆಯಿಂದ  ಲಾಭ ಪಡೆಯುತ್ತದೆ.

ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಿದ್ದ ವಿಜಯ್  ಇನ್ ಸ್ಟಾಗ್ರಾಮ್ ಗೆ ಅವರ  ಫೋಟೋಗಳನ್ನು ಪೋಸ್ಟ್ ಮಾಡಲು ಮತ್ತು ಅವರ ಚಲನಚಿತ್ರಗಳನ್ನು ಪ್ರಚಾರ ಮಾಡಲು ಹೊಸ ಮಾರ್ಗವೆಂದು ಪರಿಗಣಿಸಲಾಗಿದೆ.

ಫೇಸ್ ಬುಕ್ ನಲ್ಲಿ 7.8 ಮಿಲಿಯನ್ ಹಾಗೂ ಟ್ವಿಟ್ಟರ್ ನಲ್ಲಿ 4.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು