ಮಂಗಳೂರು: ಎಎಸ್ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಆಶಿಕಾ ಸುವರ್ಣ ನಿರ್ಮಾಣದಲ್ಲಿ ಪ್ರಧಾನ ಎಂ ಪಿ ನಿರ್ದೇಶನದಲ್ಲಿ ತಯಾರಾದ ವಿಐಪಿ ಲಾಸ್ಟ್ ಬೆಂಚ್ ತುಳು ಸಿನಿಮಾ ಡಿಸೆಂಬರ್ 16ರಂದು ತೆರೆ ಕಾಣಲಿದೆ ಮಂಗಳೂರು ಉಡುಪಿ ಸಹಿತ ಬೇರೆ ಬೇರೆ ಪ್ರದೇಶಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.
ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಪೃಥ್ವಿ ಅಂಬರ್, ರೂಪೇಶ್ ಶೆಟ್ಟಿ , ವಿನೀತ್ ಕುಮಾರ್ , ಪ್ರಕಾಶ್ ಪಾಂಡೇಶ್ವರ್ , ಭೋಜರಾಜ್ ವಾಮಂಜೂರ್, ವಿಸ್ಮಯ ವಿನಾಯಕ ಮತ್ತಿತರರು ತರಂಗಣದಲ್ಲಿ ಈ ಸಿನಿಮಾದಲ್ಲಿ ಮುಖ್ಯವಾಗಿ ನಟಿಸಿದ್ದು. ತುಳು ಸಿನಿಮಾರಂಗದ ಖ್ಯಾತನಾಮ ಕಲಾವಿದರಾದ ಪೃಥ್ವಿ ಅಂಬರ್, ರೂಪೇಶ್ ಶೆಟ್ಟಿ, ವಿನೀತ್ ಕುಮಾರ್ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಒಟ್ಟಾಗಿ ಕಾಣಿಸಿಕೊಂಡಿರುವುದು ಈ ಸಿನಿಮಾದ ವಿಶೇಷತೆಯಾಗಿದೆ .
ಅಲ್ಲದೆ ಇನ್ನಿತರ ಸಮಗ್ರ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಚಿತ್ರ ತಂಡದ ಪ್ರಧಾನ್, ಸಚಿನ್, ವಿನಿತ್, ವಿಸ್ಮ ವಿನಾಯಕ ಮತ್ತಿದ್ದರರು ಮಾಹಿತಿಯನ್ನು ನೀಡಿದರು.