News Karnataka Kannada
Saturday, April 20 2024
Cricket
ಮನರಂಜನೆ

ಸ್ವರಾ ಭಾಸ್ಕರ್‌ ಹೊಸ ಚಿತ್ರದ ವಿಶೇಷತೆಯೇನು ಗೊತ್ತಾ…

Do you know what's special about Swara Bhasker's new film?
Photo Credit : News Kannada

ಮುಂಬೈ: ಇತ್ತೀಚೆಗಷ್ಟೇ ರಾಜಕೀಯ ಕಾರ್ಯಕರ್ತ ಫಹಾದ್ ಅಹ್ಮದ್ ಅವರೊಂದಿಗೆ ವಿವಾಹವಾಗಿರುವ ನಟಿ ಸ್ವರಾ ಭಾಸ್ಕರ್ ಅವರು ತಮ್ಮ ಚಿತ್ರ ‘ಮಿಸೆಸ್ ಫಲಾನಿ’ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಅದರಲ್ಲಿ ಚಿತ್ರದಲ್ಲಿ ಅವರು ಬಹು ಪಾತ್ರ ನಿರ್ವಹಿಸಿದ್ದಾರೆ.

ಈ ಚಿತ್ರವು 8 ವಿಭಿನ್ನ ಕಥೆಗಳನ್ನು ಆಧರಿಸಿದೆ ಮತ್ತು ಒಂದೇ ಚಿತ್ರದಲ್ಲಿ ನಟಿ ವಿವಿಧ ಪ್ರದೇಶಗಳಿಗೆ ಸೇರಿದ 8 ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದು, ವಿಭಿನ್ನ ಭಾಷೆಯಲ್ಲಿ ಸಂವಹನ, ವಿಭಿನ್ನ ಉಡುಪು ಸೇರಿದಂತೆ ವೈವಿಧ್ಯಮಯವಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ಸ್ವರಾ, “ಶ್ರೀಮತಿ ಫಲಾನಿ’ ನಿಜವಾಗಿಯೂ ವಿಶೇಷವಾದ ಚಿತ್ರ. ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಅನೇಕ ಪಾತ್ರ ನಿರ್ವಹಣೆಗೆ ಅವಕಾಶ ಸಿಕ್ಕಿದೆ. ವಿಭಿನ್ನ ಮತ್ತು ವಿಶಿಷ್ಟವಾದ 8 ಸ್ತ್ರೀ ಪಾತ್ರ ನಿರ್ವಹಿಸುವುದು ಸವಾಲಾಗಿತ್ತು. ಆದರೆ ವಿವಿಧ ಭಾಷೆ, ಸಂಸ್ಕೃತಿಯ ಜನರ ಹೆಣ್ತನದ ಪಾತ್ರಗಳಲ್ಲಿ ಪಾಲ್ಗೊಳ್ಳುವುದು ನನಗೆ ಹೆಮ್ಮೆ ತಂದಿದೆ ಎಂದರು.

ಚಿತ್ರದಲ್ಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್ ಮತ್ತು ಇತರ ರಾಜ್ಯಗಳನ್ನು ಪ್ರತಿನಿಧಿಸುವ ಹೌಸ್‌ ಮೇಕರ್‌ ಪಾತ್ರದಲ್ಲಿ ಸ್ವರಾ ಕಾಣಿಸಿಕೊಂಡಿದ್ದಾರೆ. ಸ್ವರಾ ಕೂಡ ಚಿತ್ರಕ್ಕಾಗಿ ಮೂಗುತಿ ಚುಚ್ಚಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು