News Kannada
Saturday, March 02 2024
ಮನರಂಜನೆ

ದಸರಾ ಚಿತ್ರ ತಂಡ ಸದಸ್ಯರಿಗೆ ಕೀರ್ತಿ ಸುರೇಶ್‌ ಚಿನ್ನದ ನಾಣ್ಯ ಕೊಡುಗೆ

Keerthy Suresh donates gold coin to Dasara team members
Photo Credit : By Author

ಹೈದರಾಬಾದ್: ನಾನಿ ಅಭಿನಯದ ‘ದಸರಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಕೀರ್ತಿ ಸುರೇಶ್, ಚಿತ್ರದ ಶೂಟಿಂಗ್‌ನ ಕೊನೆಯ ದಿನದಂದು ಸಿನಿಮಾ ತಂಡದ ಪ್ರತಿ ಸದಸ್ಯರಿಗೆ ತಲಾ 10 ಗ್ರಾಂನ 130 ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

“ಚಿತ್ರೀಕರಣದ ಕೊನೆಯ ದಿನದಂದು ಕೀರ್ತಿ ಸಾಕಷ್ಟು ಭಾವುಕರಾಗಿದ್ದರು” ಎಂದು ‘ದಸರಾ’ ಘಟಕದ ಮೂಲಗಳು ತಿಳಿಸಿವೆ. “ಚಿತ್ರಕ್ಕಾಗಿ ದುಡಿದ ತಂಡದ ಸದಸ್ಯರಿಗೆ ಏನಾದರೂ ಕೊಡುಗೆ ನೀಡಲು ಅವರು ಬಯಸಿದ್ದರು, ಈ ನಿಟ್ಟಿನಲ್ಲಿ ಚಿನ್ನದ ನಾಣ್ಯ ಕೊಡುಗೆ ನೀಡಿದ್ದಾರೆ . ಚಿತ್ರದಲ್ಲಿ ಕೀರ್ತಿ ಸುರೇಶ್ ಅವರು ‘ವೆನ್ನೆಲ’ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ತೆಲುಗು ಭಾಷೆಯ ಪ್ಯಾನ್-ಇಂಡಿಯಾ ಚಲನಚಿತ್ರಕ್ಕೆ ನಾನಿ ಶ್ರೀಕಾಂತ್ ಒಡೆಲಾ ಅವರ ನಿರ್ದೇಶನವಿದೆ. ನಾನಿ ಮತ್ತು ಕೀರ್ತಿ ಸುರೇಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು