News Kannada
Saturday, August 13 2022

ಮಲಯಾಳಂ

ಕೇರಳ: ಮಲಯಾಳಂ ಖ್ಯಾತ ನಟ ಶರತ್ ಚಂದ್ರನ್ ಶವವಾಗಿ ಪತ್ತೆ - 1 min read

Malayalam actor Sarath Chandra found dead

ಕೇರಳ: ಮಲಯಾಳಂ ಖ್ಯಾತ ನಟ ಶರತ್ ಚಂದ್ರನ್ ಶವವಾಗಿ ಪತ್ತೆಯಾಗಿದ್ದಾರೆ. ಜುಲೈ 29 ಶುಕ್ರವಾರ ಶರತ್ ಶವ ಪತ್ತೆಯಾಗಿದೆ. ಸ್ಟಾರ್ ಆಗಿ ಮರೆಯಬೇಕಿದ್ದ ನಟ ಶರತ್ ಚಂದ್ರ ನಿಗೂಢ ಸಾವು ಮಾಲಿವುಡ್ ಅನ್ನು ಬೆಚ್ಚಿಬೀಳಿಸಿದೆ. 37 ವರ್ಷದ ನಟನ ಸಾವಿಗೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ.

ಇನ್ನು ಕೊಚ್ಚಿ ಮೂಲದವರಾದ ಶರತ್, ಈ ಹಿಂದೆ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಅವರು ಡಬ್ಬಿಂಗ್ ಕಲಾವಿದರಾಗಿ ಚಲನಚಿತ್ರದಲ್ಲಿಯೂ ಕೆಲಸ ಮಾಡಿದರು. ಅನೀಸ್ಯ ಚಿತ್ರದ ಮೂಲಕ ಚಂದ್ರನ್ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.

ಕೊಚ್ಚಿ ಮೂಲದಶರತ್ ಚಂದ್ರನ್, ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಐಟಿ ಜಾಬ್ ಮಾಡುತ್ತಿದ್ದರು. ನಂತರ ನಟನೆ ಬಗ್ಗೆ ಆಸಕ್ತಿ ತೋರಿದರು. ‘ಅಂಗಮಾಲಿ ಡೈರೀಸ್​’ ಸಿನಿಮಾ ಮೂಲಕ ಶರತ್ ಜನಪ್ರಿಯತೆ ಹೆಚ್ಚಿತು. ಇದಲ್ಲದೆ ‘ಮೆಕ್ಸಿಕನ್​ ಅಪರಾತ’ (2017), ‘ಸಿಐಎ: ಕಾಮ್ರೇಡ್​ ಇನ್ ಅಮೆರಿಕ’ (2017), ‘ಕೂಡೆ’ (2018) ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ನಟ ಆಯಂಟನಿ ಅವರು ಈ ವಿಚಾರವನ್ನು ಅಧಿಕೃತ ಮಾಡಿದ್ದಾರೆ. ಶರತ್ ಫೋಟೋ ಪೋಸ್ಟ್ ಮಾಡಿ ‘ರಿಪ್ ಬ್ರದರ್​​’ ಎಂದು ಅವರು ಬರೆದುಕೊಂಡಿದ್ದಾರೆ. ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ವರದಿಯಾಗಿದೆ.

See also  ಮಲಯಾಳಂ ಹಿರಿಯ ನಟಿ ಲಲಿತಾ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು