ಮುಂಬೈ: ಕೊರಿಯಾದ ಗಾಯಕಿ ಹೇಸೂ 29 ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹೇಸೂ ತನ್ನ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೋಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಪತ್ರ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 20 ರಂದು ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಸಜ್ಜಾಗಿದ್ದರು. ಹೇಸೂ ದಕ್ಷಿಣ ಕೊರಿಯಾದ ಜನಪ್ರತಿಯ ಟ್ರಾಟ್ ಗಾಯಕರಾಗಿದ್ದರು. 2019 ರಲ್ಲಿ ಗಾಯನ ಕ್ಷೇತ್ರದಲ್ಲಿದ್ದು, ಸಿಂಗಲ್ ಆಲ್ಬಂ ‘ಮೈ ಲೈಫ್ ಐ ವಿಲ್’ ಬಿಡುಗಡೆ ನಂತರ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿದ್ದರು. ದಕ್ಷಿಣ ಕೊರಿಯಾದ ಕಾರ್ಯಕ್ರಮಗಳಾದ ದಿ ಟ್ರಾಟ್ ಶೋ, ಎಎಂ ಪ್ಲಾಜಾ ಮತ್ತು ಗಯೋ ಸ್ಟೇಜ್ಗಳಲ್ಲಿ ಕಾಣಿಸಿಕೊಂಡ ನಂತರ ಮನೆಮಾತಾಗಿದ್ದರು.