ಮುಂಬೈ: ‘ದಹಾದ್’ ಚಿತ್ರ ಒಟಿಟಿಯಲ್ಲಿ ಅನಾವರಣಗೊಳ್ಳಲಿದ್ದು, ಈ ಚಿತ್ರಕ್ಕಾಗಿ ನಟಿ ಸೋನಾಕ್ಷಿ ಸಿನ್ಹಾ ಬೈಕಿಂಗ್ ಕಲಿತಿದ್ದಾರೆ. ಈಗ ರೈಡಿಂಗ್ ನನ್ನ ಫ್ಯಾಶನ್ ಆಗಿದೆ ಎಂದು ಬಾಲಿವುಡ್ ನಟಿ ಹೇಳಿದ್ದಾರೆ. ಸೂಪರ್ ಕಾಪ್ ಪಾತ್ರದಲ್ಲಿ ಸೋನಾಕ್ಷಿ ಕಾಣಿಸಿಕೊಂಡಿದ್ದಾರೆ. ಸೆಟ್ನ ಮೂಲಗಳ ಪ್ರಕಾರ, ನಟಿ ಶೂಟಿಂಗ್ ಸಮಯದಲ್ಲಿ ಬೈಕ್ ಓಡಿಸುವುದು ಹೇಗೆಂದು ಕಲಿತಿದ್ದಾರೆ.
ಬೈಕಿಂಗ್ ಮೇಲಿನ ಪ್ರೀತಿಯ ಬಗ್ಗೆ ಮಾತನಾಡಿರುವ ಅವರು “ನಾನು ಈ ಪಾತ್ರ ಮಾಡಿದ್ದಕ್ಕೆ ತುಂಬಾ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರೀಕರಣ ಬಳಿಕ ರಾತ್ರಿ ನನ್ನ ಸ್ನೇಹಿತರೊಂದಿಗೆ ಬೈಕಿಂಗ್ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ರೀಮಾ ಕಾಗ್ತಿ ಮತ್ತು ರುಚಿಕಾ ಒಬೆರಾಯ್ ನಿರ್ದೇಶಿಸಿದ್ದಾರೆ. ಮುಂಬರುವ ಸರಣಿಯು ಮೇ 12 ರಂದು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಯಾಗಲಿದೆ.