ಮಹಾರಾಷ್ಟ್ರ: ಶ್ರೀಲಂಕಾದ ಹೆಸರಾಂತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಜೀವನಗಾಥೆ ಆಧಾರಿತ ‘800’ ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದು, ಅ.6ರಂದು ಚಿತ್ರ ತೆರೆಗೆ ಬರುತ್ತಿದೆ.
ತಮಿಳಿನ ಹೆಸರಾಂತ ನಿರ್ದೇಶಕ ವೆಂಕಟ್ ಪ್ರಭು ನನ್ನ ಪತ್ನಿಗೆ ಪರಿಚಯ. ಅವರು ನನ್ನ ಜೀವನಚರಿತ್ರೆಯನ್ನು ಸಿನಿಮಾವಾಗಿಸುವ ಪ್ರಸ್ತಾಪ ಮುಂದಿಟ್ಟರು. ಮೊದಲಿಗೆ ಒಪ್ಪಿಕೊಳ್ಳಲಿಲ್ಲ. ಇದರಿಂದ ನಾನು ಶ್ರೀಲಂಕಾದಲ್ಲಿ ನಡೆಸುತ್ತಿರುವ ಟ್ರಸ್ಟ್‌ಗೆ ಸಹಾಯವಾಗಬಹುದೆಂದು ಜೊತೆಗಿದ್ದವರು ನನ್ನನ್ನು ಒಪ್ಪಿಸಿದರು.
ವಿಜಯ್ ಸೇತುಪತಿ ಈ ಚಿತ್ರ ಮಾಡಬೇಕಿತ್ತು. ನಿರ್ದೇಶಕರು ಬದಲಾದರು, ನಿರ್ಮಾಣ ಸಂಸ್ಥೆ ಬದಲಾಯಿತು. ಚಿತ್ರೀಕರಣದ ವೇಳೆ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಪ್ರಾರಂಭವಾಯಿತು. ಎಲ್ಲ ಅಡೆತಡೆಗಳನ್ನು ದಾಟಿ ಅಂತಿಮವಾಗಿ ಚಿತ್ರ ತೆರೆಗೆ ಬರುತ್ತಿರುವುದು ಸಂತೋಷದ ಸಂಗತಿ’ ಎಂದು ಮುರುಳೀಧರನ್ ಸಮತಸ ಹಂಚಿಕೊಂಡಿದ್ದಾರೆ.
ಇನ್ನು ಬಾಲಿವುಡ್ ನಟ ಮಧುರ್ ಮಿತ್ತಲ್ ಮುರಳೀಧರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ಹಿಂದಿ, ತೆಲುಗು ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ.