ಮುಂಬೈ: ಪರಿಣಿತಿ ಚೋಪ್ರಾ ಮತ್ತು ರಾಘವ್ ಛಡ್ಡಾ ಡಿನ್ನರ್ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಮದುವೆಯ ಬಗ್ಗೆ ಕೇಳಿದಾಗ ಇಬ್ಬರೂ ಪ್ರತಿಕ್ರಿಯೆ ನೀಡಿಲ್ಲ.
ಸೆಲೆಬ್ರಿಟಿ ಪಾಪರಾಜಿ ಭಯಾನಿ ಇನ್ಸ್ಟಾಗ್ರಾಂನಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಪರಿಣಿತಿ ಸಂಪೂರ್ಣ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರೆ, ರಾಘವ್ ಛಡ್ಡಾ ಕಪ್ಪು ಪ್ಯಾಂಟ್ ಬೂದು ಬಣ್ಣದ ಶರ್ಟ್ ನಲ್ಲಿ ಕಂಗೊಳಿಸುತ್ತಿದ್ದಾರೆ.
“ಶಾದಿ ಕಬ್ ಹೈ” ಎಂದು ನಿರಂತರವಾಗಿ ಅಭಿಮಾನಿಗಳು ಕೇಳಿದರೂ ಇಬ್ಬರೂ ಪ್ರತಿಕ್ರಿಯೆ ನೀಡದೇ ಕಾರಿನಲ್ಲಿ ಹೊರಟು ಹೋಗಿದ್ದಾರೆ.
ವಿಮಾನ ನಿಲ್ದಾಣ, ರೆಸ್ಟೋರೆಂಟ್ ಸೇರಿದಂತೆ ಹಲವು ಸ್ಥಳಗಳಲ್ಲಿ ಪರಿಣಿತಿ ಮತ್ತು ರಾಘವ್ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ಇಬ್ಬರೂ ತಮ್ಮ ಸಂಬಂಧವನ್ನು ಎಂದಿಗೂ ನಿರಾಕರಿಸಿಲ್ಲ ಅಥವಾ ಒಪ್ಪಿಕೊಂಡಿಲ್ಲ.
ಏತನ್ಮಧ್ಯೆ, ಇಮ್ತಿಯಾಜ್ ಅಲಿ ನಿರ್ದೇಶನದ ‘ಚಮ್ಕಿಲಾ’ ಚಿತ್ರದಲ್ಲಿ ಪರಿಣೀತಿ, ದಿಲ್ಜಿತ್ ದೊಸಾಂಜ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಚಿತ್ರವು ಪಂಜಾಬಿ ಗಾಯಕ ಅಮರ್ ಸಿಂಗ್ ಚಮ್ಕಿಲಾ ಅವರಿಂದ ಸ್ಫೂರ್ತಿ ಪಡೆದಿದೆ.