News Kannada
Monday, December 11 2023
ಮನರಂಜನೆ

ಕೇರಳದಲ್ಲಿ ನಟಿ ಖುಷ್ಬೂವಿನ ಕಾಲು ತೊಳೆದು ನಾರಿ ಪೂಜೆ ಮಾಡಿದ ಅರ್ಚಕರು

Priests in Kerala wash Khushboo's feet, perform Nari Puja
Photo Credit : News Kannada

ಕೇರಳ: ನಟಿ, ಬಿಜೆಪಿ ನಾಯಕಿ , ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿಯೂ ಖುಷ್ಬೂ ಸುಂದರ್ ಕೇರಳಕ್ಕೆ ಭೇಟಿ ನೀಡಿದ್ದು ಇದೀಗ ಭಾರೀ ಸುದ್ದಿಯಾಗಿದೆ. ಯಾಕೆಂದರೆ ನಟಿ ಖುಷ್ಬುರ ಹಲವು ದೇವಾಲಯನ್ನು ಅವರ ಅಭಿಮಾನಿಗಳು ತಮಿಳುನಾಡು, ಆಂಧ್ರ-ತೆಲಂಗಾಣಗಳಲ್ಲಿ ನಿರ್ಮಿಸಿದ್ದಾರೆ.

ಅಲ್ಲಿ ಪ್ರತಿನಿತ್ಯ ಅವರಿಗೆ ಪೂಜೆ ಸಹ ನಡೆಯುತ್ತದೆ. ಆದರೆ ಕೇರಳದಲ್ಲಿ ನಿಜವಾಗಿಯೂ ಖುಷ್ಬು ಪಾದ ತೊಳೆದು ಪೂಜೆ ಮಾಡಲಾಗಿದೆ. ಖುಷ್ಬುಗೆ ಅರ್ಚಕರು ಪೂಜೆ ಮಾಡಿರುವ ಚಿತ್ರಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇವರಿಗೆ ಕೇರಳದಲ್ಲಿ ನಾರಿ ಪೂಜೆ ಮಾಡಲಾಗಿದ್ದು, ಇವರ ಕಾಲನ್ನು ತೊಳೆದು ಪೂಜೆ ಸಲ್ಲಿಸಲಾಗಿದೆ. ಅಷ್ಟಕ್ಕೂ ನಾರಿ ಪೂಜೆ ಕೇರಳದಲ್ಲಿ ಮಾಮೂಲು. ಈ ಬಾರಿ ನಟಿ, ರಾಜಕಾರಣಿ ಖುಷ್ಬೂ ಅವರನ್ನು ದೇವಿಗೆ ಪೂಜೆ ಸಲ್ಲಿಸುವಂತೆ ಕಾಲು ತೊಳೆದು ಸಂಪ್ರದಾಯದಂತೆ ಪೂಜೆಯನ್ನು ಮಾಡಲಾಗಿದೆ.

ಪೂಜೆಯ ಕುರಿತು ಮಾಹಿತಿ ಶೇರ್​ ಮಾಡಿಕೊಂಡಿರುವ ನಟಿ, ದೇವರಿಂದ ಆಶೀರ್ವಾದ ಸಿಕ್ಕಿದೆ. ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನದಲ್ಲಿ ನಾರಿ ಪೂಜೆ ಮಾಡಲು ಕರೆದಿದ್ದು ನನ್ನ ಅದೃಷ್ಟ. ಕೆಲವರನ್ನು ಮಾತ್ರ ಆಯ್ಕೆ ಮಾಡಿ ಇಲ್ಲಿಗೆ ಕರೆಯಲಾಗುತ್ತೆ. ದೇವತೆಯೇ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ನಂಬುತ್ತಾರೆ. ದೇವಸ್ಥಾನ ಪ್ರತಿಯೊಬ್ಬರು ನನಗೆ ಆಶೀರ್ವಾದ ಮಾಡಿ ಗೌರವ ನೀಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ. ಈ ಆಚರಣೆಯಿಂದ ಇನ್ನೂ ಅನೇಕ ಒಳ್ಳೆಯ ವಿಷಯ ನಮ್ಮದಾಗುತ್ತದೆ. ನನ್ನ ಪ್ರೀತಿಪಾತ್ರರು ಮತ್ತು ಜಗತ್ತು ಸಂತೋಷ ಮತ್ತು ಶಾಂತಿಯುತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

See also  ಕುಂದಾಪುರ: ಮಾಜಿ ಶಾಸಕ ಲಕ್ಷ್ಮೀನಾರಾಯಣ ಸೇರೆಗಾರ ಮತ ಚಲಾವಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು