News Kannada
Friday, February 23 2024
ತೆಲುಗು

‘ಎ’ ಪ್ರಮಾಣಪತ್ರ ಪಡೆದ ಪ್ರಭಾಸ್‌ ಅಭಿನಯದ ‘ಸಲಾರ್ʼ

ಪ್ರಶಾಂತ್‌ ನೀಲ್‌ ಇದೀಗ 'ಸಲಾರ್‌' ಚಿತ್ರದ ಮೂಲಕ ಮತ್ತೊಮ್ಮೆ ಮ್ಯಾಜಿಕ್‌ ಮಾಡಲು ಮುಂದಾಗುತ್ತಿದ್ದಾರೆ.
Photo Credit : News Kannada

ಬೆಂಗಳೂರು: ಪ್ರಶಾಂತ್‌ ನೀಲ್‌ ಇದೀಗ ‘ಸಲಾರ್‌’ ಚಿತ್ರದ ಮೂಲಕ ಮತ್ತೊಮ್ಮೆ ಮ್ಯಾಜಿಕ್‌ ಮಾಡಲು ಮುಂದಾಗುತ್ತಿದ್ದಾರೆ.

ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌ ಅಭಿನಯದ ‘ಸಲಾರ್‌’ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ‘ಸಲಾರ್: ಭಾಗ 1’ ಡಿಸೆಂಬರ್‌ 22ರಂದು ಬಿಡುಗಡೆಯಾಗಲಿದೆ. ಈಗ ‘ಸಲಾರ್​’ ಸಿನಿಮಾಗೆ ಸೆನ್ಸಾರ್​ ಬೋರ್ಡ್​ನಿಂದ ‘ಎ’ ಸರ್ಟಿಫಿಕೇಟ್​ ನೀಡಲಾಗಿದೆ. ಹಾಗಾಗಿ ಈ ಸಿನಿಮಾದಲ್ಲೂ ಕ್ರೌರ್ಯ ಅಬ್ಬರಿಸಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

`ಎ’ ಸರ್ಟಿಫಿಕೇಟ್‌ ಸಿಕ್ಕರೆ 18 ವರ್ಷಕ್ಕಿಂತ ಕಿರಿಯರು ಆ ಸಿನಿಮಾವನ್ನು ನೋಡುವಂತಿಲ್ಲ. ಇದರಿಂದ ಮಕ್ಕಳ ಜತೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ತೊಂದರೆ ಆಗಲಿದೆ. ಹೀಗಾಗಿ ಸಲಾರ್‌ ಸಿನಿಮಾ ಉತ್ತಮ ಕಲೆಕ್ಷನ್‌ ಮಾಡೋದು ಡೌಟ್‌ ಅಂತಿದ್ದಾರೆ.

ಕೆಜಿಎಫ್‌ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್‌ ನ ವಿಜಯ್‌ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್‌, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು