ಬರ್ಮಿಂಗ್ಹ್ಯಾಮ್: ಬರ್ಮಿಂಗ್ಹ್ಯಾಮ್ನಲ್ಲಿ ವಿವಾದಾತ್ಮಕ ಬಾಲಿವುಡ್ ಚಲನಚಿತ್ರ ‘ದಿ ಕೇರಳ ಸ್ಟೋರಿ’ ಪ್ರದರ್ಶನ ಸಂದರ್ಭ ಮುಸ್ಲಿಂ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಕಾಶ್ಮೀರಿ ಕಾರ್ಯಕರ್ತ ಶಕೀಲ್ ಅಫ್ಸರ್ ನೇತೃತ್ವದ ಪ್ರತಿಭಟನಾಕಾರರ ಗುಂಪು ಶುಕ್ರವಾರ ಬರ್ಮಿಂಗ್ಹ್ಯಾಮ್ನ ಸಿನಿವರ್ಲ್ಡ್ ಥಿಯೇಟರ್ನಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ಅಡ್ಡಿಪಡಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಬ್ರಿಟಿಷ್ ಮುಸ್ಲಿಂ ಸುದ್ದಿ ವೆಬ್ಸೈಟ್ ಈ ಬಗ್ಗೆ ಅಪ್ಲೋಡ್ ಮಾಡಲಾದ 10 ನಿಮಿಷಗಳ ಕ್ಲಿಪ್ನಲ್ಲಿಪ್ರದರ್ಶನಕಾರರ ಗುಂಪು ಚಿತ್ರಮಂದಿರಕ್ಕೆ ಪ್ರವೇಶಿಸಿ ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸುವಂತೆ ಒತ್ತಾಯಿಸುವುದನ್ನು ತೋರಿಸಿದೆ. ಪ್ರೇಕ್ಷಕರು ಮತ್ತು ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಯಿತು.
ಕಾರ್ಯಕರ್ತರನ್ನು ಹೊರಹಾಕಿದ ನಂತರ ಮಾತನಾಡಿದ ಥಿಯೇಟರ್ ಅಟೆಂಡೆಂಟ್ ಪ್ರೇಕ್ಷಕರಿಗೆ ಹೀಗೆ ಹೇಳಿದ್ದಾರೆ. ನೀವು ಈ ಚಲನಚಿತ್ರವನ್ನು ವೀಕ್ಷಿಸಲು ಬಯಸಿದರೆ, ಮೊದಲು ಶಾಂತವಾಗಿರಿ, ನಾನು ಈ ಚಿತ್ರ ಪ್ರದರ್ಶನ ಪುನರಾರಂಭಿಸಲಿದ್ದೇವೆ. ಪೊಲೀಸರಿಗೆ ಕರೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.