News Kannada
Monday, March 04 2024
ತಮಿಳು

ಕಾಲಿವುಡ್​ನ ಸ್ಟಾರ್​ ದಳಪತಿ ವಿಜಯ್ ಗೆ ಜನ್ಮದಿನದ ಸಂಭ್ರಮ

thalapathy vijay
Photo Credit : Twitter

ತಮಿಳಿನ ಸೂಪರ್ ಸ್ಟಾರ್​ ದಳಪತಿ ವಿಜಯ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ಅವರಿಗೆ ಇಂದು 49ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರ ಜನ್ಮದಿನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಬಾಲ್ಯ ನಟನಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ವಿಜಯ್ ಬಳಿಕ 1992 ರಲ್ಲಿ ಮೊದಲ ಬಾರಿಗೆ ನಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಇದುವರೆಗೆ 67 ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಿಯೋ ಅವರ ಮುಂದಿನ ಚಿತ್ರ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ಲೋಕೇಶ್ ಕನಗರಾಜು ನಿರ್ದೇಶಿಸಿದ್ದಾರೆ.ಇದು ಅಕ್ಟೋಬರ್ 19 ರಂದು ಬಿಡಗುಡೆಯಾಗಲಿದೆ.

1990 ರ ದಶಕದ ಮಧ್ಯಭಾಗದಲ್ಲಿ ವಿಜಯ್ ಪೂರ್ಣ ಪ್ರಮಾಣದ ಹೀರೋ ಆಗಿ ಗುರುತಿಸಿಕೊಂಡರು. ನಂತರದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ ಅವರಿಗೆ, ರಸಿಗನ್ ಚಿತ್ರದ ನಂತರ ಅವರಿಗೆ ದಳಪತಿ ಎಂಬ ಬಿರುದು ದೊರಕಿತು. ವಿಜಯ್ ಬೀಸ್ಟ್, ಮರ್ಸೆಲ್, ಮಾಸ್ಟರ್​, ಥೇರಿ, ಸರ್ಕಾರ್, ಪುಲಿ, ಕತ್ತಿ, ಭೈರವಾ, ಖುಷಿ, ಸುರ, ಪ್ರೆಂಡ್ಸ್ ಸೇರಿದಂತೆ 50ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು