News Kannada
Sunday, March 26 2023

ತೆಲುಗು

1,000 ಎಕರೆ ಕಾಡನ್ನು ದತ್ತು ಪಡೆದ ಅಕ್ಕಿನೇನಿ ನಾಗಾರ್ಜುನ

Photo Credit :

ರಾಜ್ಯ ಸಭೆಯ ಸದಸ್ಯ ಸಂತೋಷ್​ ಜೋಗಿನಪಲ್ಲಿ ಅವರಿಗೆ ಮರಗಳ ಮೇಲೆ ಅತ್ಯಂತ ಹೆಚ್ಚು ಪ್ರೀತಿ. ಅವರು ಮರಗಳನ್ನು ಉಳಿಸಲು ಹಾಗೂ ಬೆಳೆಸಲು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಇವರ ಪರಿಚಯ ಅನೇಕರಿಗೆ ಇದೆ. ಗ್ರೀನ್​ ಇಂಡಿಯಾ ಚಾಲೆಂಜ್​​ ಅಡಿಯಲ್ಲಿ 16 ಕೋಟಿ ಮರಗಳನ್ನು ಅವರು ಬೆಳೆಸಿದ್ದಾರೆ. ಈ ಒಂದು ಅದ್ಭುತ ಕೆಲಸಕ್ಕೆ ಸಾಕಷ್ಟು ಸೆಲೆಬ್ರಿಟಿಗಳನ್ನೂ ಅವರು ಸೇರ್ಪಡೆ ಮಾಡಿಕೊಂಡಿದ್ದಾರೆ. ಈಗ ಈ ಸಾಲಿಗೆ ಅಕ್ಕಿನೇನಿ ನಾಗಾರ್ಜುನ ಕೂಡ ಸೇರಿಕೊಂಡಿದ್ದಾರೆ.

ಸಂತೋಷ್​ ಅವರು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ತೆಲುಗು ಬಿಗ್​ ಬಾಸ್​ ವೇದಿಕೆ ಏರಿದ್ದರು. ಈ ವೇಳೆ ಪ್ರಭಾಸ್​ ಅವರು 1643 ಎಕರೆ ಅರಣ್ಯ ದತ್ತು ಪಡೆದಿದ್ದಾರೆ ಎಂದು ಸಂತೋಷ್​ ಮಾಹಿತಿ ನೀಡಿದರು.

ಈ ವೇಳೆ ನಾಗಾರ್ಜುನ ಅವರು ನಿಜಕ್ಕೂ ಸಂತಸಗೊಂಡರು. ಅಲ್ಲದೆ, ನಿಂತ ಜಾಗದಲ್ಲೇ 1,000 ಎಕರೆ ಕಾಡನ್ನು ದತ್ತು ಪಡೆಯುವುದಾಗಿ ಘೋಷಿಸಿದರು. ‘ಪರಿಸರವನ್ನು ಕಾಪಾಡುವ ಜವಾಬ್ದಾರಿ ನಮ್ಮದು. ಹೀಗಾಗಿ, ಕಾಡುಗಳನ್ನು ನಾನು ದತ್ತುಪಡೆಯುತ್ತಿದ್ದೇನೆ. ಆ ಕಾಡನ್ನು ಪೋಷಿಸುವ ಹೊಣೆಯನ್ನು ನಾನು ಈಗಲೇ ಹೊತ್ತುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ಅವರು. ಈ ವಿಚಾರ ಕೇಳಿ ಅಭಿಮಾನಿಗಳು ಹಾಗೂ ಸಂತೋಷ್​ ಅವರು ನಿಜಕ್ಕೂ ಸಂತಸ ಪಟ್ಟಿದ್ದಾರೆ.

ನಾಗಾರ್ಜುನ ಅವರು ತೆಗೆದುಕೊಂಡ ಈ ನಿರ್ಧಾರದಿಂದ ಅನೇಕರಿಗೆ ಸ್ಫೂರ್ತಿ ಸಿಗಲಿದೆ. ಅವರ ಅಭಿಮಾನಿಗಳು ಕೂಡ ಕಾಡುಗಳನ್ನು ಪಡೆದುಕೊಳ್ಳಲು ಆಸಕ್ತಿ ತೋರಿಸುವ ಸಾಧ್ಯತೆ ಇದೆ. ಓರ್ವ ಅಭಿಮಾನಿ ಒಂದು ಎಕರೆ ಕಾಡನ್ನು ದತ್ತು ಪಡೆದರೂ ಅದರ ಒಟ್ಟಾರೆ ಸಂಖ್ಯೆ  .

See also  ಡ್ರಗ್ಸ್‌ ಪ್ರಕರಣ: ಇ.ಡಿ. ಎದುರು ಹಾಜರಾದ ತೆಲುಗು ನಟ ರವಿತೇಜ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು