ರಾಜಕಾರಣಿಯ ಬಂಧು ಎಂದು ಹೇಳಿಕೊಂಡು ನೂರಾರು ಜನರಗೆ ಕೋಟ್ಯಂತರ ರೂ. ವಂಚನೆ ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್ ಜತೆ ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕಲಿನ್ ಫರ್ನಾಂಡಿಸ್ ಹೆಸರು ತಳುಕು ಹಾಕಿಕೊಂಡು ಇಬ್ಬರು ಪ್ರೀತಿಯಲ್ಲಿ ಇದ್ದಾರೆ ಎಂಬುದನ್ನು ಜಗತ್ತಿನ ಮುಂದೆ ಬಯಲಾಗಿತ್ತು. ಇತ್ತೀಚೆಗೆ ಇವರ ಮತ್ತೊಂದು ಫೋಟೋ ಸಖತ್ ವೈರಲ್ ಆಗಿತ್ತು. ಸುಕೇಶ್ ಚಂದ್ರಶೇಖರ್ ಜಾಕಲಿನ್ ಫರ್ನಾಂಡಿಸ್ ಮೇಲೆ ಮಲಗಿ ಮುತ್ತಿಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತು.
ಇದೆಲ್ಲಾ ಸುಳ್ಳು ಎಂದು ಹೇಳಿಕೊಂಡು ಬಂದಿದ್ದ ಜಾಕಲಿನ್ ಫರ್ನಾಂಡಿಸ್, ಈ ಫೋಟೋ ವೈರಲ್ ಆದ ಬಳಿಕ ಗಪ್ಚುಪ್ ಆಗಿದ್ದರು. ಇದೀಗ ಈ ಪ್ರಕರಣ ಇವರ ಕೆರಿಯರ್ಗೆ ಹೊಡೆತ ಕೊಟ್ಟಿದೆ. ಹೌದು, ಜಾಕಲಿನ್ ಅವರನ್ನು ಈಗಾಗಲೇ ಬಾಲಿವುಡ್ ದೂರ ಮಾಡಿದೆ. ಯಾರು ಜಾಕಲಿನ್ ಸಹಾಯಕ್ಕೆ ಬಂದಿಲ್ಲ. ಅದರಲ್ಲೂ ಸಲ್ಮಾನ್ ಖಾನ್ ಈಕೆಯನ್ನೂ ದೂರ ಮಾಡಿದ್ಧಾರೆ. ಇದೇ ಪ್ರಕರಣಕ್ಕೆ ಈಕೆ ಒಪ್ಪಿಕೊಂಡಿದ್ದ ಸಿನಿಮಾಗಳು ಜಾಕಲಿನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಟಾಲಿವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾದಿಂದ ಜಾಕಲಿನ್ ಔಟ್ ಆಗಿದ್ದಾರೆ.
‘ದಿ ಘೋಸ್ಟ್’ ಸಿನಿಮಾದಿಂದ ಜಾಕಲಿನ್ ಔಟ್. ನಾಗಾರ್ಜುನ ಅಕ್ಕಿನೇನಿ ‘ದಿ ಘೋಸ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಆರಂಭದಲ್ಲಿ ನಾಯಕಿಯಾಗಿ ಕಾಜಲ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ, ಅವರು ಪ್ರೆಗ್ನೆನ್ಸಿ ಕಾರಣ ನೀಡಿ ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ಕಾರಣಕ್ಕೆ ಈಗ ಜಾಕ್ವೆಲಿನ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿತ್ತು. ಆದರೆ, 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಕಿಂಗ್ಪಿನ್ ಜತೆ ಅವರಿಗೆ ನಂಟಿದೆ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಅವರನ್ನು ಚಿತ್ರತಂಡಕ್ಕೆ ಆಯ್ಕೆ ಮಾಡಿಕೊಂಡರೆ ಸಿನಿಮಾಗೆ ಹಿನ್ನಡೆ ಆಗಬಹುದು ಎಂದು ಚಿತ್ರತಂಡ, ಜಾಕಲಿನ್ ಅವರನ್ನು ಸಿನಿಮಾದಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.