News Kannada
Sunday, September 25 2022

ತೆಲುಗು

125 ಮಕ್ಕಳ ಹಾರ್ಟ್​ ಸರ್ಜರಿಗೆ ನೆರವಾಗುತ್ತಿರುವ ಸ್ಟಾರ್​ ನಟ ಮಹೇಶ್​ ಬಾಬು - 1 min read

Photo Credit :

ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರು ಬಗೆಬಗೆಯ ಸಿನಿಮಾಗಳ ಮೂಲಕ ಜನರನ್ನು ರಂಜಿಸುತ್ತಾರೆ. ಪ್ರತಿ ಸಿನಿಮಾಗೆ ಮಹೇಶ್​ ಬಾಬು ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಲ್ಲಿ ನಟಿಸಿದರೂ ಅವರಿಗೆ ಕೈ ತುಂಬ ಹಣ ಸಿಗುತ್ತದೆ. ಹೀಗೆ ಕೋಟ್ಯಂತರ ರೂಪಾಯಿ ಗಳಿಸುವ ಅವರು ಸಮಾಜಮುಖಿ ಕೆಲಸಗಳಿಗಾಗಿಯೂ ತಮ್ಮ ಆದಾಯದ ಒಂದು ಪಾಲನ್ನು ಮೀಸಲು ಇರಿಸಿದ್ದಾರೆ.

ಮೊದಲಿನಿಂದಲೂ ಮಹೇಶ್​ ಬಾಬು ಅವರು ಜನಪರ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ. ಅದಕ್ಕಾಗಿ ‘ಮಹೇಶ್​ ಬಾಬು ಫೌಂಡೇಶನ್​’ ಹಗಲಿರುಳು ಕಾರ್ಯನಿರತವಾಗಿದೆ. ಬಡವರಿಗೆ ವಿವಿಧ ರೀತಿಯಲ್ಲಿ ಈ ಸಂಸ್ಥೆ ಮೂಲಕ ನೆರವು ಸಿಕ್ಕಿದೆ. ಈಗ ಇನ್ನೊಂದು ವಿಶೇಷ ಕಾಳಜಿಗಾಗಿ ಮಹೇಶ್​ ಬಾಬು ಮುಂದೆಬಂದಿದ್ದಾರೆ. ಹೃದಯದ ಸಮಸ್ಯೆಯಿಂದ ಬಳಲುವ ಪುಟ್ಟ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಮಹೇಶ್​ ಬಾಬು ಫೌಂಡೇಶನ್  ಪಣ ತೊಟ್ಟಿದೆ. ಮಕ್ಕಳ ಹಾರ್ಟ್​ ಸರ್ಜರಿಗೆ ಈ ಸಂಸ್ಥೆ ನೆರವು ನೀಡಲಿದೆ. ಈ ಕಾರ್ಯದಿಂದಾಗಿ ಮಹೇಶ್​ ಬಾಬು ಅವರು ಹೃದಯವಂತ ಎಂಬುದು ಮತ್ತೊಮ್ಮೆ ಸಾಬೀತು ಆದಂತಾಗಿದೆ.

ಇಂದಿನ ದಿನಗಳಲ್ಲಿ ಹೃದಯದ ಸಮಸ್ಯೆ ಬಗ್ಗೆ ಜನರು ತೀವ್ರವಾಗಿ ಚಿಂತೆಗೀಡಾಗಿದ್ದಾರೆ. ಯುವ ಜನರು ಹೃದಯಾಘಾತದಿಂದ ಮೃತರಾಗುತ್ತಿರುವ ಘಟನೆ ಪದೇಪದೇ ವರದಿ ಆಗುತ್ತಿದೆ. ಇನ್ನು, ಚಿಕ್ಕ ಮಕ್ಕಳಲ್ಲಿಯೂ ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹುಟ್ಟುವಾಗಲೇ ಅನೇಕ ಮಕ್ಕಳಿಗೆ ಈ ರೀತಿಯ ತೊಂದರೆ ಇರುತ್ತದೆ. ಬಡ ಕುಟುಂಬದ ಮಕ್ಕಳಿಗೆ ಇಂಥ ಸಮಸ್ಯೆಗಳಿದ್ದರೆ ಅವರಿಗೆ ಚಿಕಿತ್ಸೆ ಕೊಡಿಸಲು ‘ಮಹೇಶ್​ ಬಾಬು ಫೌಂಡೇಶನ್​’ ಸಹಾಯ ಮಾಡಲಿದೆ.

ಈ ಕಾರ್ಯಕ್ಕಾಗಿ ಮಹೇಶ್​ ಬಾಬು ಅವರು ಹೈದರಾಬಾದ್​ನ ರೇನ್​ಬೋ ಚಿಲ್ರನ್ಸ್​ ಹಾರ್ಟ್​ ಇನ್ಸ್​ಟಿಟ್ಯೂಟ್​ ಜೊತೆ ಕೈ ಜೋಡಿಸಿದ್ದಾರೆ. ಪ್ಯೂರ್​ ಲಿಟಲ್​ ಹಾರ್ಟ್​ ಫೌಂಡೇಶನ್​ ಸ್ಥಾಪಿಸಿ, ಅದರ ಮೂಲಕ ಮಕ್ಕಳ ಹೃದಯದ ಚಿಕಿತ್ಸೆಗೆ ನೆರವು ನೀಡಲಾಗುತ್ತದೆ. ಇತ್ತೀಚೆಗೆ ಇದರ ಲಾಂಚಿಂಗ್​ ಕಾರ್ಯಕ್ರಮ ನಡೆಯಿತು. ಅದರಲ್ಲಿ ಮಹೇಶ್​ ಬಾಬು ಭಾಗಿ ಆಗಿದ್ದರು. ಈ ಮೂಲಕ ಅವರು 125 ಮಕ್ಕಳ ಹಾರ್ಟ್​ ಸರ್ಜರಿಗೆ ನೆರವಾಗಲಿದ್ದಾರೆ. ‘ಮಕ್ಕಳೆಂದರೆ ನನಗೆ ಯಾವಾಗಲೂ ಇಷ್ಟ. ಹೃದಯದ ಚಿಕಿತ್ಸೆ ಅಗತ್ಯ ಇರುವ ಮಕ್ಕಳಿಗೆ ನೆರವು ನೀಡುತ್ತಿರುವುದಕ್ಕೆ ನನಗೆ ಖುಷಿ ಇದೆ. ಪುಟ್ಟ ಹೃದಯಗಳಿಗೆ ಅತಿ ಹೆಚ್ಚಿನ ಕಾಳಜಿ ಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

 

See also  ಡ್ರಗ್ಸ್‌ ಪ್ರಕರಣ: ಇ.ಡಿ. ಎದುರು ಹಾಜರಾದ ತೆಲುಗು ನಟ ರವಿತೇಜ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು