News Karnataka Kannada
Saturday, April 20 2024
Cricket
ಮನರಂಜನೆ

ಟ್ರ್ಯಾಕ್ಟರ್‌ ಓಡಿಸಿದ ಬಿಗ್‌ ಬಿ ಮೊಮ್ಮಗಳು: ವಿಡಿಯೋ ವೈರಲ್‌

Video of Big B's granddaughter driving a tractor goes viral
Photo Credit : News Kannada

ಮುಂಬೈ: ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಗುಜರಾತ್‌ನ ಹಳ್ಳಿಯೊಂದರಲ್ಲಿ ಟ್ರ್ಯಾಕ್ಟರ್ ಓಡಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಆರೋಗ್ಯ ಟೆಕ್ ಕಂಪನಿಯಾದ ಆರಾ ಹೆಲ್ತ್‌ನ ಸಹ-ಸಂಸ್ಥಾಪಕಿಯಾಗಿರುವ ನವ್ಯಾ ಅವರು ಗುಜರಾತ್‌ನ ಹಳ್ಳಿಯೊಂದಕ್ಕೆ ಪ್ರವಾಸಕ್ಕಾಗಿ ಹೋಗಿದ್ದರು. ಈ ವೇಳೆ ಅಲ್ಲಿ ಅವರು ಸ್ಥಳೀಯ ಮಹಿಳೆಯರನ್ನು ಭೇಟಿಯಾಗಿದ್ದು, ಐಷಾರಾಮಿ ಕಾರಿನ ಬದಲಿಗೆ ಟ್ರಾಕ್ಟರ್ ಓಡಿಸುತ್ತಿರುವ ವೀಡಿಯೋ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಅವರು ಬರೆದುಕೊಂಡಿದ್ದು, ಸ್ವತಃ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಗುಜರಾತ್‌ ಗಣೇಶಪುರಕ್ಕೆ ಭೇಟಿ ನೀಡಿ ಆರಾ ಹೆಲ್ತ್ ಆಯೋಜಿಸಿದ್ದ ಸಭೆಯಲ್ಲಿ ನವ್ಯಾ ಮಾತನಾಡಿದ್ದರು.

ನವ್ಯಾ ಯಾರು: ನವ್ಯಾ ಬಿಗ್ ಬಿ ಮಗಳು ಶ್ವೇತಾ ಬಚ್ಚನ್ ಮತ್ತು ಅವರ ಉದ್ಯಮಿ-ಪತಿ ನಿಖಿಲ್ ನಂದಾ ಅವರ ಮಗಳು, ನಟರಾದ ಕರೀನಾ ಕಪೂರ್ ಮತ್ತು ರಣಬೀರ್ ಕಪೂರ್ ಅವರ ಸೋದರಸಂಬಂಧಿ. ಆಕೆಗೆ ಅಗಸ್ತ್ಯ ಎಂಬ ಸಹೋದರನಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು