News Kannada
Sunday, March 03 2024
ಮನರಂಜನೆ

ಹ್ಯಾಪಿ ಬರ್ತ್‌ಡೇ ಹನಿ ಬೀ ಎಂದು ನಟಿ ಜಾಕ್ವೆಲಿನ್ ಶುಭಾಷಯ ಕೋರಿದ್ದು ಯಾರು?

Who wished Jacqueline a happy birthday honey bee?
Photo Credit : IANS

ಹೊಸದಿಲ್ಲಿ: ಬಹುಕೋಟಿ ವಂಚನೆಯ ಆರೋಪಿ, ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಶುಕ್ರವಾರ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಜನ್ಮದಿನದಂದು ಶುಭ ಹಾರೈಸಿದ್ದಾನೆ. ಅಲ್ಲದೆ ಮುಂದೆ ಒಟ್ಟಿಗೆ ಬರ್ತ್‌ಡ ಆಚರಿಸಲು ಕಾಯುತ್ತಿರುವುದಾಗಿ ಬರೆದುಕೊಂಡಿದ್ದಾನೆ.

ಪ್ರಸ್ತುತ ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಚಂದ್ರಶೇಖರ್, ನಟಿಯನ್ನು ತಮ್ಮ “ಮಗು” (ಬೇಬಿ) ಎಂದು ಸಂಬೋಧಿಸಿದ್ದಾರೆ. ನಿನಗೆ ಜನ್ಮದಿನದ ಶುಭಾಶಯಗಳು. ದೇವರು ನಿನ್ನನ್ನು ಆಶೀರ್ವದಿಸಲಿ, ನಿನ್ನ ಜನ್ಮದಿನವು ನನಗೆ ಅತ್ಯಂತ ಸಂತೋಷದಾಯಕ ದಿನವಾಗಿದೆ. ನನ್ನ ಹುಟ್ಟುಹಬ್ಬಕ್ಕಿಂತಲೂ ನಿನ್ನ ಹುಟ್ಟುಹಬ್ಬ ನನಗೆ ಹೆಚ್ಚು ಅರ್ಥಪೂರ್ಣವಾಗಿದೆ. ನೀನು ದಿನದಿಂದ ದಿನಕ್ಕೆ ಹೆಚ್ಚು ಸುಂದರವಾಗುತ್ತೀದ್ದೀಯಾ, ಯೌವನ ಪಡೆಯುತ್ತಿದ್ದೀಯಾ ಎಂದು ಬರೆದಿರುವ ಪತ್ರವನ್ನು ಶುಕ್ರವಾರ ಬೆಳಗ್ಗೆ ಸುಕೇಶ್‌ ವಕೀಲ ಅನಂತ್ ಮಲಿಕ್ ಮೂಲಕ ಬಿಡುಗಡೆ ಮಾಡಲಾಗಿದೆ.

ನಿನಗೆ ಅತ್ಯಪೂರ್ವ ಹೂವುಗಳನ್ನು ಉಡುಗೊರೆಯಾಗಿ ನೀಡುವ ಮತ್ತು ಅಪ್ಪಿಕೊಳ್ಳುವ ಕ್ಷಣಗಳನ್ನು ಕಳೆದುಕೊಂಡಿದ್ದೇನೆ. ನಿನ್ನೊಂದಿಗೆ ಕೇಕ್ ಹಂಚಿಕೊಳ್ಳುವ ಕ್ಷಣ ಮಿಸ್‌ ಆಗಿದೆ ಎಂದಿದ್ದಾನೆ.

ಬೇಬಿ ನಿನಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಚಿನ್ನ, ವಜ್ರಗಳು ಅಥವಾ ಮುತ್ತುಗಳಂತಹ ವಸ್ತುಗಳಿಗಿಂತಲೂ ಪ್ರಾಣಿಗಳಿಗೆ ಆಶ್ರಯ ತಾಣ ನಿರ್ಮಿಸುವ ವಿಚಾರವೇ ಹೆಚ್ಚು ಖುಷಿ ತರುತ್ತದೆ ಎಂಬುದು ನನಗೆ ಗೊತ್ತು ಎಂದು ಹೇಳಿದ್ದಾನೆ. ಅಲ್ಲದೆ ಮುಂದಿನ ವರ್ಷ ಖಂಡಿತವಾಗಿಯೂ ಒಟ್ಟಿಗೆ ಬರ್ತ್‌ಡೇ ಆಚರಿಸೋಣ…. ಜನ್ಮದಿನದ ಶುಭಾಷಗಳು ಹನಿಬೀ ಎಂದು ಹೇಳಿಕೊಂಡಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು