News Kannada
Sunday, March 03 2024
ಆರೋಗ್ಯ

ಅನ್ನದೊಂದಿಗೆ ಸವಿಯಲು ಬಲು ರುಚಿ ಬ್ರಾಹ್ಮಿ (ತಿಮರೆ) ಚಟ್ನಿ

Photo Credit :

ತಿಮರೆ ಒಂದು ಔಷಧೀಯ ಸಸ್ಯವಾಗಿದ್ದು ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿದೆ. ತಿಮರೆ/ಬ್ರಾಹ್ಮಿ/ಒಂದೆಲಗ  ಸೊಪ್ಪನ್ನು ಉಪಯೋಗಿಸಿ ಮಾಡುವ ಕೆಲವು ಅಡುಗೆಗಳಿದ್ದು, ಅದರಲ್ಲಿ ಈ ಚಟ್ನೀ ಒಂದಾಗಿದೆ. ಈ ಚಟ್ನಿ ಮಾಡಲು ಸುಲಭ ಹಾಗೂ ಬಹಳ ರುಚಿಯಾಗಿರುತ್ತದೆ.

ಬೇಕಾಗುವ ಪದಾರ್ಥಗಳು:

  • ಎರಡು ಹಿಡಿ ಬ್ರಾಹ್ಮಿ ಎಲೆ
  • 1/2 ಕಪ್ ತೆಂಗಿನ ತುರಿ
  • 1/3 ಬೆರಳುದ್ದ ಶುಂಠಿ
  • 2 ಒಣ ಮೆಣಸಿನಕಾಯಿ
  • 1/2 ನೆಲ್ಲಿಕಾಯಿ ಗಾತ್ರ ಹುಣಿಸೆ ಹಣ್ಣು
  • 1/2 ನೆಲ್ಲಿಕಾಯಿ ಗಾತ್ರ ಬೆಲ್ಲ
  • ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  • 1/2 ಒಣ ಮೆಣಸಿನಕಾಯಿ
  • 1/4 ಟೀಸ್ಪೂನ್ ಸಾಸಿವೆ
  • 1 ಟೀಸ್ಪೂನ್ ಅಡುಗೆ ಎಣ್ಣೆ

ಚಟ್ನಿ ಮಾಡುವ ವಿಧಾನ: ಮೊದಲಿಗೆ ತಿಮರೆ/ಬ್ರಾಹ್ಮಿ/ಒಂದೆಲಗ ಎಲೆಗಳನ್ನು ಆಯ್ದು, ತೊಳೆಯಿರಿ. ನಂತರ ಅರೆಯಲು ಬೇಕಾದ ಎಲ್ಲ ಪದಾರ್ಥಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

ಸಿದ್ಧ ಮಾಡಿಟ್ಟುಕೊಂಡ ಎಲ್ಲ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ಅರೆಯಿರಿ. ಸಾಸಿವೆ ಮತ್ತು ಒಣ ಮೆಣಸಿನ ಒಗ್ಗರಣೆ ಕೊಡಿ. ಈ ಚಟ್ನಿ ಅನ್ನದೊಂದಿಗೆ ತಿನ್ನಲು ಬಲು ರುಚಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು