ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ – 2-3
ಮೊಸರು – 500 ಗ್ರಾಂ
ಉಪ್ಪು ರುಚಿಗೆ ತಕ್ಕಷ್ಟು
ಹಸಿ ಮೆಣಸು 2
ಸಾಸಿವೆ – 1 ಚಮಚ
ಹೆಸರು ಬೇಳೆ 1 ಚಮಚ
ಕರಿಬೇವು
ಹಿಂಗು
ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ :
ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಮ್ಯಾಶ್ ಮಾಡಿ. ಒಂದು ಬೌಲ್ನಲ್ಲಿ ಇದನ್ನು ಹಾಕಿ ಅದಕ್ಕೆ ಉಪ್ಪು, ಮೊಸರು, ಹಸಿಮೆಣಸು ಹಾಕಿ. ಪ್ಯಾನ್ ಹೀಟ್ ಮಾಡಿ ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ ಹಾಕಿ, ನಂತರ ಹೆಸರು ಬೇಳೆ, ಕರಿಬೇವು ಮತ್ತು ಹಿಂಗು ಹಾಕಿ. ಈ ಒಗ್ಗರಣೆಯನ್ನು ಮೊಸರು ಮತ್ತು ಆಲೂಗಡ್ಡೆ ಮೇಲೆ ಹಾಕಿ. ಇದನ್ನು ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ ಸರ್ವ್ ಮಾಡಿ.