News Karnataka Kannada
Saturday, April 20 2024
Cricket
ಅಡುಗೆ ಮನೆ

ಬಾಳೆ ಕಾಯಿ ಕಾಪು

Photo Credit :

ಬಾಳೆ ಕಾಯಿ ಕಾಪು

ಮಳೆಗಾಲ ಎಂದರೆ ಮೊದಲೇ ಮಳೆ..ಥಂಡಿ. ಏನಾದರೂ ಬಿಸಿ ಬಿಸಿ,ಖಾರ ಖಾರ ತಿಂಡಿಗಳನ್ನು ಚಪ್ಪರಿಸಲು ಮನ ಹಾತೊರೆಯುತ್ತದೆ. ಹೊರಗಡೆ ಧೋ ಎಂದು ಮಳೆ ಸುರಿಯುತ್ತಿದ್ದರೆ ಮನೆಯೊಳಗಡೆ ಕುಳಿತು ಬಿಸಿ ಬಿಸಿ ತಿನಿಸುಗಳನ್ನು ಮಾಡಿ ತಿನ್ನೋಣ ಎಂಬ ಆತುರ ಎಲ್ಲರ ಮನದಲ್ಲೇ ಇದ್ದೇ ಇರುತ್ತದೆ. ಆದರೆ ಸ್ಪೇಷಲ್ ಆಗಿ ಏನು ಮಾಡೋದಂತ ಹೊಳೆಯದೇ ಚಡಪಡಿಸುವರು ಎಷ್ಟೋ ಮಂದಿ. ಬನ್ನಿ ಇವತ್ತು ನಾವು ಬಾಳೆ ಕಾಯಿ ಕಾಪು ಮಾಡಿ ಸವಿಯೋಣ.

ಬೇಕಾಗುವ ಸಾಮಗ್ರಿಗಳು
ಬಾಳೆಕಾಯಿ :1
ಅಕ್ಕಿ ಹಿಟ್ಟು : ಒಂದು ಲೋಟ
ಕೊತ್ತಂಬರಿ : ಎರಡು ಚಮಚ
ಒಣ ಮೆಣಸು : 5
ಉದ್ದು : ಒಂದು ಚಮಚ
ತೆಂಗಿನ ತುರಿ : ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ : ಸ್ವಲ್ಪ
ಹುಣಸೆ ಹುಳಿ : ಸಣ್ಣ ಗೋಲಿ ಗಾತ್ರದ್ದು
ಬೆಲ್ಲ : ಸಣ್ಣ ಚೂರು

ತಯಾರಿಸುವ ವಿಧಾನ.
1.ಅಕ್ಕಿಹಿಟ್ಟನ್ನು ಬಾಣಲೆಗೆ ಹಾಕಿ ಪರಿಮಳ ಬರುವ ತನಕ ಹುರಿದುಕೊಳ್ಳಿ.
2.ಮಿಕ್ಸಿಯಲ್ಲಿ ಕೊತ್ತಂಬರಿ,ಒಣ ಮೆಣಸು, ಉದ್ದು,ತೆಂಗಿನ ತುರಿ,ಉಪ್ಪು,ಹುಣಸೆ, ಬೆಲ್ಲ ಮತ್ತು ಹುರಿದ ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ನೀರನ್ನು ಮಿಶ್ರ ಮಾಡಿ ರುಬ್ಬಿ. ಈ ಮಿಶ್ರಣವು ಬೋಂಡ ಹಿಟ್ಟಿನ ಹದದಲ್ಲಿ ಇರಬೇಕು.
3.ಬಾಳೆ ಕಾಯಿಯನ್ನು ಬಿಲ್ಲೆಗಳಾಗಿ ಹೆಚ್ಚಿ ಈ ಮಿಶ್ರಣದಲ್ಲಿ ಹಾಕಿ.
4.ಕಾವಲಿಯನ್ನು ಬಿಸಿ ಮಾಡಿ, ಒಂದು ಚಮಚ ಎಣ್ಣೆ ಹಾಕಿ. ಅಕ್ಕಿ ಹಿಟ್ಟಿನ ಮಿಶ್ರಣದಲ್ಲಿ ಅದ್ದಿದ ಬಾಲೆಕಾಯಿಯ ಬಿಲ್ಲೆಗಳನ್ನು ಕಾವಲಿಯಲ್ಲಿ ಹಾಕಿ ಬೇಯಿಸಿ. 2-3 ನಿಮಿಷ ಕಳೆದ ಮೇಲೆ ಬಾಳೆ ಕಾಯಿ ಬಿಲ್ಲೆಗಳನ್ನು ಮಗುಚಿ ಹಾಕಿ ಬೇಯಿಸಬೇಕು. ಈಗ ನೋಡಿ ಸವಿಯಲು ಸಿದ್ಧವಾಗಿರುವ ಬಿಸಿ ಬಿಸಿ ಕಾಳೆ ಕಾಪುವಿನ ರುಚಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು