News Karnataka Kannada
Saturday, April 20 2024
Cricket
ಅಡುಗೆ ಮನೆ

ಬಿಸಿಲ ಬೇಗೆಗೆ ಸೀಯಾಳದ ನೀರಿನ ಶರಬತ್ ಕುಡಿದು ನೋಡಿ

Photo Credit :

ಬಿಸಿಲ ಬೇಗೆಗೆ ಸೀಯಾಳದ ನೀರಿನ ಶರಬತ್ ಕುಡಿದು ನೋಡಿ

ಚಳಿಗಾಲ ಅಂತ್ಯವಾಗುತ್ತಾ ಬರುತ್ತಿರುವಂತೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಅದೇ ದೇಹದಲ್ಲಿ ನೀರಿನಾಂಶವು ಉಳಿದಿಕೊಳ್ಳಲು ನಾವು ಹೆಚ್ಚು ಹೆಚ್ಚು ದ್ರವಾಹಾರ ಸೇವನೆ ಮಾಡಬೇಕು. ಅದರಲ್ಲೂ ನೀರು, ಹಣ್ಣುಗಳ ಜ್ಯೂಸ್ ಇತ್ಯಾದಿ ಸೇವನೆ ಮಾಡಿದರೆ ದೇಹವನ್ನು ನಿರ್ಜಲೀಕರಣದಿಂದ ತಪ್ಪಿಸಬಹುದು.
ಅದರಲ್ಲೂ ಆರೋಗ್ಯಕ್ಕೆ ಹಲವಾರು ಲಾಭಗಳನ್ನು ನೀಡುವ ಸೀಯಾಳವನ್ನು ಹಾಗೆ ಸೇವಿಸುವ ಬದಲು ಅದಕ್ಕೆ ಸ್ವಲ್ಪ ಬೇರೆ ಸಾಮಗ್ರಿ ಹಾಕಿಕೊಂಡು ಸೇವಿಸಿದರೆ ರುಚಿ ಹೆಚ್ಚುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಇದು ಹಿತಕಾರಿ.

ಸೀಯಾಳ ನೀರಿನೊಂದಿಗೆ ಲಿಂಬೆ ಮತ್ತು ಪುದೀನಾ ಎಲೆ
ಒಂದು ಸೀಯಾಳದ ನೀರು
ಪುದೀನಾ ಎಲೆಗಳು
1 ಚಮಚ ಜೇನುತುಪ್ಪ
1 ಲಿಂಬೆ

ಲಿಂಬೆ ಮತ್ತು ಪುದೀನಾ ಜತೆ ಸೀಯಾಳ ತಯಾರಿಸುವ ವಿಧಾನ
*ಸೀಯಾಳದಿಂದ ನೀರನ್ನು ತೆಗೆದು ಒಂದು ಜಗ್ ಗೆ ಹಾಕಿ.
*ಚಮಚ ಬಳಸಿಕೊಂಡು ಸೀಯಾಳದ ಗಂಜಿ ತೆಗೆಯಿರಿ
* ಇದನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಸೀಯಾಳದ ನೀರಿಗೆ ಹಾಕಿ.
* ಪುದೀನಾ ಎಲೆ, ಜೇನುತುಪ್ಪ ಮತ್ತು ಲಿಂಬೆರಸ, ಲಿಂಬೆ ತುಂಡುಗಳನ್ನು ಹಾಕಿ.
* ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಕುಡಿಯಿರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು