ಬೇಸಿಗೆಕಾಲದಲ್ಲಿ ಹೊರಗಡೆ ಹೋಗುವುದೇ ಬೇಡ ಅನಿಸುತ್ತಸುತ್ತದೆ. ಅಷ್ಟು ಸೂರ್ಯನ ತಾಪಮಾನ. ಸೂರ್ಯನ ತಾಪಮಾನದಿಂದ ಹೊರ ಬರಲು ಕೆಲವೊಂದು ತಂಪುಪಾನೀಯಗಳನ್ನು ಕುಡಿದರೆ ಅಬ್ಬಾ… ಎಂದೆನಿಸುತ್ತದೆ. ತಂಪುಪಾನೀಯಗಳಲ್ಲಿ ಲಾವಂಚ ಜ್ಯೂಸ್ ಒಂದು. ಬನ್ನಿ ಲಾವಂಚ ಜ್ಯೂಸ್ ಅನ್ನು ಕುಡಿದು ತಮ್ಮ ದಣಿವನ್ನು ನೀಗಿಸೋಣ.
ಬೇಕಾಗುವ ಸಾಮಾಗ್ರಿ:
1.ಕಾಲು ಕಪ್ ನೆಲಕಡಲೆ ಬೀಜ
2.ಎರಡು ಬಾಳೆಹಣ್ಣು
3.1ಕಪ್ ತೆಂಗಿನಕಾಯಿ ಹಾಲು
4.1ಕಪ್ ಬೆಲ್ಲ
5.ಅರ್ಧ ಚಮಚ ಏಲಕ್ಕಿ ಪುಡಿ
ತಯಾರಿಸುವ ವಿಧಾನ: ನೆಲಕಡಲೆಯನ್ನು 2 ಗಂಟೆ ನೆನೆಸಿ. ನಂತರ ನೀರು ಸೇರಿಸಿ ರುಬ್ಬಿ ನಂತರ ಜರಡಿಯಲ್ಲಿ ಹಾಕಿ ಸೋಸಿ. ಬಳಿಕ ತೆಂಗಿನ ಹಾಲು ಬಾಳೆಹಣ್ಣು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಸೋಸಿದ ನೆಲಕಡಲೆ, ಹಾಲು, ಬೆಲ್ಲ ಏಲಕ್ಕಿ ಪುಡಿ ಎಲ್ಲವನ್ನೂ ಬೆರೆಸಿ. ಬೇಕಾದಷ್ಟು ತೆಳ್ಳಗೆ ಮಾಡಿ ಕುಡಿಯಿರಿ.