ಈಗ ಮಾವಿನ ಸೀಸನ್. ಹಣ್ಣುಗಳ ರಾಜ ಮಾವು ತಿನ್ನಲು ರುಚಿ. ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಮಾವಿನ ಸಿಪ್ಪೆ, ಓಟೆ, ಕಾಯಿ, ತೊಗಟೆ, ಕಾಯಿ ಎಲ್ಲವೂ ಆರೋಗ್ಯಕರವಾದುದು. ಇವತ್ತು ನಾವು ಮಾವಿನ ಕಾಯಿ ತಂಬುಳಿಯನ್ನು ಮಾಡಿ ಸವಿಯೋಣ.
ಬೇಕಾಗುವ ಸಾಮಾಗ್ರಿ
1.ಹಸಿ ಮೆಣಸಿನ ಕಾಯಿ 1
2.ತೆಂಗಿನ ತುರಿ ಸ್ವಲ್ಪ
3.ಉಪ್ಪು
4.ಒಗ್ಗರಣೆ ಎಣ್ಣೆ
5.ಸಾಸಿವೆ ಕಾಳು,
6.ಇಂಗು ಓಣಮೆಣಸು 1
ತಯಾರಿಸುವ ವಿಧಾನ: ಮೊದಲು ಮಾವಿನಕಾಯಿಯನ್ನು ಸಣ್ಣ ಹೋಳುಗಳನ್ನು ಮಾಡಿಕೊಂಡು ಅದಕ್ಕೆ ತೆಂಗಿನ ತುರಿಯನ್ನು ಸೇರಿಸಿ ಉಪ್ಪು ಹಾಕಿ ರುಬ್ಬಿಕೊಂಡು ಅದನ್ನು ತಂಬುಳಿ ಹದಕ್ಕೆ ನೀರು ಸೇರಿಸಿ ಅದಕ್ಕೆ ಸಾಸಿವೆ ಇಂಗು, ಒಣಮೆಣಸಿನಕಾಯಿ ಒಗ್ಗರಣೆ ಹಾಕಿದರೆ ರುಚಿಯಾದ ಮಾವಿನಕಾಯಿ ತಂಬುಳಿ ರೆಡಿಯಾಗುತ್ತದೆ. ಇದನ್ನು ಅನ್ನದ ಜತೆ ಹಾಕಿಕೊಂಡು ಊಟ ಮಾಡಬೇಕು.